ಕಲಬುರಗಿ:ನೀರು ತುಂಬಿದ್ದ ಗುಂಡಿಯಲ್ಲಿ ಈಜಾಡಲು ಹೋದ ಮೂವರು ಬಾಲಕರು ದುರ್ಮರಣ ಹೊಂದಿರುವ ಘಟನೆ ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ. ಮೃತರನ್ನು ದರ್ಶನ್ (12), ಪ್ರಶಾಂತ್ (10) ಹಾಗು ವಿಘ್ನೇಶ್ (9) ಎಂದು ಗುರುತಿಸಲಾಗಿದೆ.
ಮನೆ ಕಟ್ಟಲು ತೆಗೆದ ಬುನಾದಿ ಗುಂಡಿಯಲ್ಲಿ ಮುಳುಗಿ ಮೂವರು ಬಾಲಕರು ಸಾವು - ಕಲಬುರಗಿಯಲ್ಲಿ ಮೂವರು ಬಾಲಕರು ಸಾವು
ಮಳೆ ನೀರು ತುಂಬಿದ ಗುಂಡಿಯಲ್ಲಿ ಈಜಾಡಲು ಇಳಿದ ಮೂವರು ಬಾಲಕರು ದುರ್ಮರಣ ಹೊಂದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಗುಂಡಿಯಲ್ಲಿ ಮುಳಗಿ ಮೂವರು ಬಾಲಕರು ಸಾವು
ಮನೆ ಕಟ್ಟುವುದಕ್ಕೆ ಕಾಲಮ್ ಹಾಕಿ ತಗ್ಗು ತೋಡಲಾಗಿದೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ತಗ್ಗುಗುಂಡಿ ಜಲಾವೃತವಾಗಿತ್ತು. ಮಳೆನೀರು ತುಂಬಿದ ಗುಂಡಿಗೆ ಈ ಬಾಲಕರು ಇಳಿದಿದ್ದಾರೆ. ಈ ಸಂದರ್ಭದಲ್ಲಿ ದುರಂತ ಸಂಭವಿಸಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.