ಕರ್ನಾಟಕ

karnataka

ETV Bharat / state

ಕಲಬುರಗಿ ನಗರದಲ್ಲಿ ಹಾಡಹಗಲೇ ಮೂರೂವರೆ ಲಕ್ಷ ದೋಚಿ ಖದೀಮರು ಪರಾರಿ - ಕಲಬುರಗಿಯಲ್ಲಿ ಮೂರುವರೆ ಲಕ್ಷ ಹಣ ದರೋಡೆ

ಜನರ ಮಧ್ಯೆದಲ್ಲಿಯೇ ದರೋಡೆ ನಡೆದಿದ್ದು, ಯಾರೊಬ್ಬರಿಗೂ ಗೊತ್ತಾಗದಂತೆ ಖದೀಮರು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ. ಹಾಡಹಗಲೇ ನಗರದ ಮಧ್ಯಭಾಗದಲ್ಲಿ ದರೋಡೆ ನಡೆದಿದ್ದು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

three-and-half-lac-theft-in-kalaburagi
ಕಲಬುರಗಿ ನಗರದಲ್ಲಿ ಹಾಡಹಗಲೇ ಮೂರೂವರೆ ಲಕ್ಷ ದೋಚಿ ಖದೀಮರು ಪರಾರಿ

By

Published : Jun 30, 2021, 12:23 AM IST

ಕಲಬುರಗಿ:'ಮೈಮೇಲೆ ರಕ್ತದ ಕಲೆ ಬಿದ್ದಿದೆ ನೋಡಿ' ಎಂದು ಬುಲೆರೋ ವಾಹನದ ಚಾಲಕನ ಗಮನ ಬೇರೆಡೆ ಸೆಳೆದು ಮೂರುವರೆ ಲಕ್ಷ ರೂಪಾಯಿ ನಗದು ದೋಚಿಕೊಂಡು ಹೋಗಿರುವ ಘಟನೆ ನಗರದ ಸೂಪರ್ ಮಾರ್ಕೇಟ್ ಮುಖ್ಯರಸ್ತೆಯ ವಾದಿರಾಜ ಭವನದ ಬಳಿ ನಡೆದಿದೆ.

ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣಪ್ಪ ಕಮಕನೂರು ಅವರ ಪುತ್ರ ಜಯಪ್ರಕಾಶ ಕಮಕನೂರು ಅವರೇ ಹಣ ಕಳೆದುಕೊಂಡಿದ್ದಾರೆ. ಜಯಪ್ರಕಾಶ ಅವರು ವಾದಿರಾಜ ಭವನದ ಬಳಿ ಇರುವ ಆಕ್ಸಿಸ್ ಬ್ಯಾಂಕಿನಲ್ಲಿ ಮೂರೂವರೆ ಲಕ್ಷ ರೂಪಾಯಿ ನಗದು ಡ್ರಾ ಮಾಡಿಕೊಂಡು ಬುಲೆರೋ ವಾಹನದಲ್ಲಿ ಇಟ್ಟು ಕಾರಿನ ಚಾಲಕನಿಗೆ ಬೇರೆ ಎಲ್ಲಿಯೂ ಹೋಗದಂತೆ ಹೇಳಿ, ತಮ್ಮ ಕೆಲಸದ ನಿಮ್ಮಿತ್ಯ ಬೇರೆಡೆ ಹೋಗಿದ್ದರು.

ಈ ವೇಳೆ ಬೈಕ್ ಮೇಲೆ ಬಂದ ನಾಲ್ವರು ಖದೀಮರು, ಚಾಲಕನ ಮೈಮೇಲೆ ಆತನಿಗೆ ಗೊತ್ತಾಗದಂತೆ ರಕ್ತ ಬಣ್ಣದ ದ್ರವ ಎರಚಿದ್ದಾರೆ. ನಿಮ್ಮ ಮೇಲೆ ರಕ್ತ ಬಿದ್ದಿದೆ ಎಂದು ಹೇಳಿ ಆತನ ಗಮನ ಬೇರೆಡೆ ಸೆಳೆದು ಬುಲೆರೋ ವಾಹನದಲ್ಲಿದ್ದ ಹಣದ ಬ್ಯಾಗ್ ಅನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಇದನ್ನೂ ಓದಿ:65 ಇನ್ಸ್​ಪೆಕ್ಟರ್​ಗಳನ್ನು ಎತ್ತಂಗಡಿ ಮಾಡಿದ ರಾಜ್ಯ ಪೊಲೀಸ್ ಇಲಾಖೆ

ಇದೆಲ್ಲವೂ ಜನರ ಮಧ್ಯೆದಲ್ಲಿಯೇ ನಡೆದಿದ್ದರೂ ಯಾರೊಬ್ಬರಿಗೂ ಗೊತ್ತಾಗದಂತೆ ಖದೀಮರು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ. ಹಾಡಹಗಲೇ ನಗರದ ಮಧ್ಯಭಾಗದಲ್ಲಿ ದರೋಡೆ ನಡೆದಿದ್ದು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಣ ದೋಚಿಕೊಂಡು ಹೋಗಿರುವ ಖದೀಮರ ಪತ್ತೆಗೆ ಜಾಲ ಬೀಸಿದ್ದಾರೆ.

ABOUT THE AUTHOR

...view details