ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ರಾತ್ರಿ ಕಳ್ಳತನಕ್ಕೆ ಇಳಿಯುವ ಖತರ್ನಾಕ್​ ಕಳ್ಳರು.. ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಯಡ್ರಾಮಿ ಪೊಲೀಸ್ ಠಾಣೆ

ಕಲಬುರಗಿ ಜಿಲ್ಲೆಯ ರಾಮ ಮಂದಿರದ ರಿಂಗ್ ರಸ್ತೆಯಲ್ಲಿರುವ ಟಿವಿಎಸ್ ಬೈಕ್ ಶೋರೂಮ್​ಗೆ ನಾಲ್ವರು ಖದೀಮರು ಕನ್ನ ಹಾಕಲು ಬಂದಿದ್ದಾರೆ. ಆದರೆ, ವಿಫಲರಾಗಿ ಬಂದ ದಾರಿಗೆ ಸುಂಕ ಇಲ್ಲ ಎಂದು ಕಳ್ಳರು ಮರಳಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾತ್ರಿ ಕಳ್ಳತನಕ್ಕೆ ಇಳಿಯುವ ಖತರ್ನಾಕ್​ ಕಳ್ಳರು

By

Published : Sep 25, 2019, 4:54 PM IST

ಕಲಬುರಗಿ:ಜಿಲ್ಲೆಯಲ್ಲಿ ರಾತ್ರಿ ಕಳ್ಳತನಕ್ಕೆಳಿಯುವ ಖತರ್ನಾಕ್ ಕಳ್ಳರು ಯಾರ ಭಯವೂ ಇಲ್ಲದೆ, ನಿರ್ಭಯವಾಗಿ ತಮ್ಮ ಕೆಲಸ ಮುಗಿಸಿ ಪರಾರಿಯಾಗುತ್ತಿದ್ದಾರೆ. ಕಳೆದ ರಾತ್ರಿ ಬೈಕ್ ಶೋರೂಮ್​​​ಗೆ ಕನ್ನ ಹಾಕಿದ ಕಳ್ಳರು ಕಳ್ಳತನ ಮಾಡಲು ವಿಫಲರಾಗಿ ಪಲಾಯನಗೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಗರದ ರಾಮ ಮಂದಿರದ ರಿಂಗ್ ರಸ್ತೆಯಲ್ಲಿರುವ ಟಿವಿಎಸ್ ಬೈಕ್ ಶೋರೂಮ್​ಗೆ ನಾಲ್ವರು ಖದೀಮರು ಕನ್ನ ಹಾಕಲು ಬಂದಿದ್ದಾರೆ. ಆದರೆ, ವಿಫಲರಾಗಿ ಬಂದ ದಾರಿಗೆ ಸುಂಕ ಇಲ್ಲ ಎಂದು ಮರಳಿದ್ದಾರೆ. ರಾತ್ರಿ 3 ಗಂಟೆ 18 ನಿಮಿಷಕ್ಕೆ ಟಿವಿಎಸ್ ಶೋರೂಮ್​​ಗೆ ಬರುವ ನಾಲ್ವರು ಕಳ್ಳರಲ್ಲಿ ಮೂವರು ಸೆಂಟರ್ ಲಾಕ್ ಮುರಿದು ಒಳ ನುಗ್ಗಲು ಯತ್ನಿಸಿದ್ದಾರೆ‌. ಇನ್ನೊಬ್ಬ ಇವರಿಗೆ ಕಾವಲುಗಾರನಾಗಿ ನಿಂತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾತ್ರಿ ಕಳ್ಳತನಕ್ಕೆ ಇಳಿಯುವ ಖತರ್ನಾಕ್​ ಕಳ್ಳರು..

ಆದರೆ, ಹರಸಾಹಸ ಪಟ್ಟರೂ ಕಳ್ಳತನ ಮಾಡಲು ಸಾಧ್ಯವಾಗದೆ ಬಂದ ದಾರಿಗೆ ಸುಂಕವಿಲ್ಲ ಎಂದು ಅಲ್ಲಿಂದ ಕಾಲ್ಕಿತ್ತಿದ್ದಾರೆ‌. ಖತರ್ನಾಕ್​​ ಕಳ್ಳರು ಯಾವ ಹೆದರಿಕೆಯೂ ಇಲ್ಲದೆ ನಿರ್ಭಯವಾಗಿ ದುಷ್ಕೃತ್ಯವೆಸಗಿದ ದೃಶ್ಯ ನೋಡಿದ ಕಲಬುರಗಿ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ. ಸದ್ಯ ಸ್ಟೇಷನ್ ಬಜಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಸಿಸಿಟಿವಿ ದೃಶ್ಯ ಆಧಾರದ ಮೇಲೆ ಕಳ್ಳರ ಬಂಧನಕ್ಕೆ ಜಾಲ ಬೀಸಿದ್ದಾರೆ‌.

ಎಂಟು ಮನೆಗೆ ಕನ್ನ ಹಾಕಿದ ಖತರ್ನಾಕ್​​​ ಕಳ್ಳರು:

ಇನ್ನೊಂದಡೆ ಜೇವರ್ಗಿ ತಾಲೂಕಿನ ಯಡ್ರಾಮಿ ಪಟ್ಟಣದಲ್ಲಿ ತಡರಾತ್ರಿ ಸರಣಿ ಕಳುವು ನಡೆದಿದೆ. ಒಟ್ಟು ಎಂಟು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಅಂದಾಜು 2.35 ಲಕ್ಷ ನಗದು, 50 ಗ್ರಾಂ ಚಿನ್ನಾಭರಣ ಮತ್ತಿತರ ವಸ್ತು ಕಳುವು ಮಾಡಿ ಪರಾರಿಯಾಗಿದ್ದಾರೆ‌. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳದೊಂದಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ‌. ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ABOUT THE AUTHOR

...view details