ಕಲಬುರಗಿ :ಜಿಲ್ಲೆಯಲ್ಲಿ ಕೊರೊನಾ ಭೀತಿ ಹಿನ್ನೆಲೆ ಲಾಕ್ಡೌನ್ ಜಾರಿಯಲ್ಲಿದೆ. ಈ ಮಧ್ಯೆ ರಾತ್ರೋರಾತ್ರಿ ಮಾಸ್ಕ್‌ಧಾರಿ ಕಳ್ಳರು ಹೋಲ್‌ಸೇಲ್ ಕಿರಾಣಿ ಅಂಗಡಿಗೆ ಕನ್ನ ಹಾಕಿರುವ ಘಟನೆ ನಡೆದಿದೆ.
ಲಾಕ್ಡೌನ್ ನಡುವೆ ಕಿರಾಣಿ ಅಂಗಡಿ ಲೂಟಿ ಮಾಡಿದ ಮಾಸ್ಕ್‌ಧಾರಿ ಕಳ್ಳರು - New Raghavendra nagara Police Station
ರಾತ್ರಿ ವೇಳೆ ಮಾಸ್ಕ್ ಧರಿಸಿದ್ದ ಕಳ್ಳರು ಅಂಗಡಿ ಶೆಟರ್ ಮುರಿದು ಕೌಂಟರ್ನಲ್ಲಿಟ್ಟಿದ್ದ ₹80 ಸಾವಿರ ನಗದು, 50 ಸಾವಿರ ಮೌಲ್ಯದ ಅಂಗಡಿಯಲ್ಲಿ ಸಾಮಗ್ರಿಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ..

ಲಾಕ್ಡೌನ್ ನಡುವೆ ಕಿರಾಣಿ ಅಂಗಡಿ ಲೂಟಿ ಮಾಡಿದ ಮಾಸ್ಕ್‌ಧಾರಿ ಕಳ್ಳರು
ಲಾಕ್ಡೌನ್ ನಡುವೆ ಕಿರಾಣಿ ಅಂಗಡಿ ಲೂಟಿ ಮಾಡಿದ ಮಾಸ್ಕ್‌ಧಾರಿ ಕಳ್ಳರು
ಇಲ್ಲಿನ ಮಿಸಬಾ ನಗರದಲ್ಲಿರುವ ಬಿಸ್ಮಿಲ್ಲಾ ಬೇಗ್ ಕಿರಾಣಿ ಅಂಗಡಿಗೆ ನಾಲ್ವರು ಖದೀಮರು ಕನ್ನ ಹಾಕಿದ್ದಾರೆ. ರಾತ್ರಿ ವೇಳೆ ಮಾಸ್ಕ್ ಧರಿಸಿದ್ದ ಕಳ್ಳರು ಅಂಗಡಿ ಶೆಟರ್ ಮುರಿದು ಕೌಂಟರ್ನಲ್ಲಿಟ್ಟಿದ್ದ ₹80 ಸಾವಿರ ನಗದು, 50 ಸಾವಿರ ಮೌಲ್ಯದ ಅಂಗಡಿಯಲ್ಲಿ ಸಾಮಗ್ರಿಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ.
ಕಳ್ಳರ ಕೈಚಳಕ ಅಂಗಡಿಯಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.