ಕಲಬುರಗಿ: ಆಕ್ಸಿಸ್ ಬ್ಯಾಂಕ್ ಎಟಿಎಂ ಒಡೆದು ಹಣ ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಆಳಂದ ಪಟ್ಟಣದ ಬಸ್ ಸ್ಟ್ಯಾಂಡ್ ಬಳಿಯ ಎಟಿಎಂ ನಲ್ಲಿ ನಡೆದಿದೆ.
ಕಳ್ಳರ ಕೈಚಳಕ: ಎಟಿಎಂನಲ್ಲಿ ಹಣ ಕದ್ದು ಖದೀಮರು ಪರಾರಿ - ಎಟಿಎಂ ಒಡೆದು ಹಣ ಕಳ್ಳತನ
ಎಟಿಎಂ ಒಡೆದು ಹಣ ಕಳ್ಳತನ ಮಾಡಿರುವ ಖದೀಮರು ಪರಾರಿಯಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದ್ದು, ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Atm
ತಡರಾತ್ರಿ ದುಷ್ಕರ್ಮಿಗಳು ಎಟಿಎಂ ಒಡೆದು ಹಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು, ಶ್ವಾನದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಟಿಎಂ ನಲ್ಲಿ ಸೆಕ್ಯೂರಿಟಿ ಗಾರ್ಡ್ ಮತ್ತು ಸಿಸಿಟಿವಿ ಇಲ್ಲದೆ ಇರೋದನ್ನು ಗಮನಿಸಿ ಈ ಕೃತ್ಯ ಎಸಗಲಾಗಿದೆ. ಈ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.