ಕಲಬುರಗಿ:ಕಷ್ಟಪಟ್ಟು ಬೆಳೆದ ಬೆಳೆ ರಾತ್ರೋರಾತ್ರಿ ಕಳ್ಳರು ಕದ್ದೊಯ್ದ ಪರಿಣಾಮ ಕೈಗೆ ಬಂದ ಬೆಳೆ ಕಳೆದುಕೊಂಡ ರೈತ ಕಂಗಾಲಾಗಿರುವ ಘಟನೆ ಅಫಜಪುರ ತಾಲೂಕಿನ ದಯಾನಂದನಗರ ಗ್ರಾಮದಲ್ಲಿ ನಡೆದಿದೆ.
ರಾತ್ರೋರಾತ್ರಿ ತೊಗರಿ ಬೆಳೆ ಕದ್ದೊಯ್ದ ಕಳ್ಳರು: ರೈತ ಕಂಗಾಲು - ತೊಗರಿ ಬೆಳೆ ಕಳ್ಳತನ
ನಾಲ್ಕು ಚೀಲದಲ್ಲಿ ಇಟ್ಟಿದ್ದ ತೊಗರಿ ಮತ್ತು ಹೊಲದ ಶೆಡ್ ಅಂಗಳದಲ್ಲಿ ಹರಡಿದ್ದ ಸುಮಾರು ಹತ್ತು ಚೀಲದಷ್ಟು ತೊಗರಿಯನ್ನು ಕಳ್ಳರು ಕದ್ದುಕೊಂಡು ಹೋಗಿದ್ದು, ರೈತ ಕಣ್ಣೀರು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾತ್ರೋರಾತ್ರಿ ತೊಗರಿ ಬೆಳೆ ಕದ್ದೊಯ್ದ ಕಳ್ಳರು
ಗ್ರಾಮದ ರೈತ ಸುಧಾಕರ ರೋಡಗಿ ಎಂಬುವವರು ಬೆಳೆದು ರಾಶಿ ಮಾಡಿಟ್ಟಿದ್ದ ತೊಗರಿ ಬೆಳೆಯನ್ನು ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ನಾಲ್ಕು ಚೀಲದಲ್ಲಿ ಇಟ್ಟಿದ್ದ ತೊಗರಿ ಮತ್ತು ಹೊಲದ ಶೆಡ್ ಅಂಗಳದಲ್ಲಿ ಹರಡಿದ್ದ ಸುಮಾರು ಹತ್ತು ಚೀಲದಷ್ಟು ತೊಗರಿಯನ್ನು ಕದ್ದುಕೊಂಡು ಹೋಗಿದ್ದಾರೆ. ಮೊದಲೇ ಪ್ರವಾಹದಿಂದ ಸಂಕಷ್ಟದಲ್ಲಿದ್ದ ರೈತನ ಬಾಳಲ್ಲಿ ಇದು ಮತ್ತೊಂದು ಆಘಾತವನ್ನುಂಟು ಮಾಡಿದ್ದು, ದಿಕ್ಕೂ ಕಾಣದೇ ರೈತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.