ಕರ್ನಾಟಕ

karnataka

ETV Bharat / state

ಕಲಬುರಗಿ: ಬಂಧಿಸಲು ಹೋದ ಪೊಲೀಸ್‌ ಕಾನ್‌ಸ್ಟೇಬಲ್​ಗಳ‌ ಮೇಲೆ ಚಾಕುವಿನಿಂದ ಹಲ್ಲೆ - ಆಟೋಗಳಿಗೆ ರೀಫಿಲಿಂಗ್

ಕಲಬುರಗಿಯಲ್ಲಿ ಬಂಧಿಸಲು ಹೋದ ಕಾನ್ಸಟೇಬಲ್‌ಗಳ‌ ಮೇಲೆ ಚಾಕುವಿನಿಂದ ಹಲ್ಲೆಗೈದು‌ ಮನೆಗಳ್ಳ ಪರಾರಿಯಾಗಿದ್ದಾನೆ.

Thief escaped after attacking the constables who went to arrest him with a knife
ಬಂಧಿಸಲು ಹೋದ ಕಾನಸ್ಟೇಬಲ್​ಗಳ‌ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಖದೀಮ ಪರಾರಿ

By

Published : Aug 11, 2023, 10:57 PM IST

ಕಲಬುರಗಿ:ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ತೆರಳಿದ‌ ಸಂದರ್ಭದಲ್ಲಿ ಪೊಲೀಸ್ ಕಾನಸ್ಟೇಬಲ್‌ಗಳ ಮೇಲೆ ಚಾಕುವಿನಿಂದ ಹಲ್ಲೆಗೈದು ಪರಾರಿಯಾದ ಘಟನೆ ಇಲ್ಲಿನ ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ನಡೆದಿದೆ.

ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹ್ಮದ್ ಇಮ್ರಾನ್ ಪಾಶಾ ಎಂಬಾತನನ್ನು ಬಂಧಿಸಲು ರಾಘವೇಂದ್ರ ನಗರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್‌ ಮುಜಾಹಿದ್ ಕೋತ್ವಾಲ್ ಮತ್ತು ಉಮೇಶ್ ತೆರಳಿದ್ದರು.‌ ಪೊಲೀಸರನ್ನು ಕಂಡು‌‌ ಪರಾರಿಯಾಗಲು ಯತ್ನಿಸಿದ ಮಹ್ಮದ್ ಇಮ್ರಾನ್‌ನನ್ನು ಹಿಡಿಯುವಾಗ ಚಾಕುವಿನಿಂದ ಮುಜಾಹಿದ್ ಕೋತ್ವಾಲ್ ಅವರ ತಲೆಗೆ ಹೊಡೆದು ಪರಾರಿಯಾಗಿದ್ದಾನೆಂದು‌ ದೂರಲಾಗಿದೆ. ಗಾಯಗೊಂಡಿರುವ ಕಾನ್ಸ್‌ಟೇಬಲ್ ಮುಜಾಹಿದ್ ಕೋತ್ವಾಲ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಗೃಹ ಬಳಕೆ ಸಿಲಿಂಡರ್​ನಿಂದ ಆಟೋಗಳಿಗೆ ರೀಫಿಲಿಂಗ್- ನಾಲ್ವರ ಬಂಧನ:ಕಲಬುರಗಿ ನಗರದಲ್ಲಿ ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್‌ಗಳನ್ನು ಅನಧಿಕೃತವಾಗಿ ಆಟೋರಿಕ್ಷಾಗಳಿಗೆ ರೀಫಿಲ್ಲಿಂಗ್ ಮಾಡುತ್ತಿರುವ ಬಗ್ಗೆ ದೂರಿನ ಮೇರೆಗೆ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿ, 4 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 41 ಗೃಹ ಬಳಕೆ ಸಿಲಿಂಡರ್, 1 ಆಟೋರಿಕ್ಷಾ,1 ಟಾಟಾ ಏಸ್ ವಾಹನ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಕುರಿತು ಆರೋಪಿಗಳ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ಹಾಗೂ ಎಲ್‍ಪಿಜಿ ಆರ್ಡರ್-2000 ಅಡಿ ಪ್ರಕರಣ ದಾಖಲಾಗಿದೆ‌.

ಜಿಲ್ಲಾಧಿಕಾರಿಯಿಂದ ಸಾರ್ವಜನಿಕರಿಗೆ ಸಲಹೆ:ಇತ್ತೀಚಿನ ದಿನಗಳಲ್ಲಿ ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್​ಗಳನ್ನು ಅನಧಿಕೃತವಾಗಿ ಆಟೋರಿಕ್ಷಾಗಳಿಗೆ ರೀಫಿಲ್ಲಿಂಗ್ ಮಾಡುತ್ತಿರುವ ಮತ್ತು ವಾಣಿಜ್ಯ ಬಳಕೆಗೆ ಉಪಯೋಗಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇಂತಹ ಅಪರಾಧ ಪ್ರಕರಣಗಳಲ್ಲಿ ಎಲ್‍ಪಿಜಿ ಸಿಲಿಂಡರ್ ಸೋರಿಕೆಯಾದರೆ ದೊಡ್ಡ ಪ್ರಮಾಣದಲ್ಲಿ ಅವಘಡಗಳು ಸಂಭವಿಸಬಹುದಾದ ಸಾಧ್ಯತೆಗಳಿರುತ್ತವೆ. ಆದ್ದರಿಂದ ಜಿಲ್ಲೆಯಲ್ಲಿ ಎಲ್‍ಪಿಜಿ ಸಿಲಿಂಡರ್​‍ಗಳನ್ನು ಅನಧಿಕೃತವಾಗಿ ಸಂಗ್ರಹಿಸಿ ವಾಣಿಜ್ಯ ಬಳಕೆಯ ಉಪಯೋಗಕ್ಕಾಗಿ ಮಾರಾಟ ಮಾಡುವುದು. ಆಟೋರಿಕ್ಷಾಗಳಿಗೆ ರೀಫಿಲ್ಲಿಂಗ್ ಮಾಡುವುದು ಕಂಡು ಬಂದರೆ ಸಾರ್ವಜನಿಕರು ಕೂಡಲೇ ಆಹಾರ ಇಲಾಖೆಗೆ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದಲ್ಲಿ ಅಂತಹ ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮಾಹಿತಿ ನೀಡಿದವರ ವಿವರ ಗೌಪ್ಯವಾಗಿ ಇಡಲಾಗುವುದು ಎಂದು ಜಿಲ್ಲಾಧಿಕಾರಿ ಪೌಜಿಯಾ ತರನುಮ್ ತಿಳಿಸಿದ್ದಾರೆ.

ಇದನ್ನೂ ಓದಿ:ಧಾರವಾಡ: ಮೂವರಿಗೆ ಚಾಕು ಇರಿತ

ABOUT THE AUTHOR

...view details