ಕಲಬುರಗಿ :ಮನೆಗೆ ಕನ್ನ ಹಾಕಲು ಬಂದಿದ್ದ ಖದೀಮನನ್ನು ಸ್ಥಳೀಯರು ಹಿಡಿದು ಗೂಸಾ ನೀಡಿರುವ ಘಟನೆ ನಗರದ ನ್ಯೂ ರಾಘವೇಂದ್ರ ಕಾಲೋನಿಯಲ್ಲಿ ನಡೆದಿದೆ.
ಮನೆಗೆ ಕನ್ನ ಹಾಕಲು ಬಂದು ಸಿಕ್ಕಿಬಿದ್ದ ಕಳ್ಳನಿಗೆ ಜನರಿಂದ ಭರ್ತಿ ಮರ್ಯಾದೆ.. - ಕಲಬುರಗಿಯಲ್ಲಿ ಸರಣಿ ಕಳ್ಳತನ
ಬೇಸಿಗೆ ಹಿನ್ನೆಲೆ ಜನರು ತಾಪ ತಾಳದೆ ಮನೆಗೆ ಬೀಗ ಹಾಕಿ ಮನೆ ಮೇಲ್ಛಾವಣಿ ಮೇಲೆ ಮಲಗುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಖದೀಮರು ಇತ್ತೀಚೆಗೆ ಬಡಾವಣೆಯಲ್ಲಿ ಸುಮಾರು 6 ಮನೆಗಳಿಗೆ ಕನ್ನ ಹಾಕಿದ್ದರು.
ತಡರಾತ್ರಿ ಮನೆ ಕಾಂಪೌಂಡ್ ಜಿಗಿದು ಮನೆಗೆ ಕನ್ನ ಹಾಕಲು ಯತ್ನಿಸುತ್ತಿದ್ದ ಖದೀಮನನ್ನು ಹಿಡಿದ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಆರ್‌ಜಿನಗರ ಪೊಲೀಸರಿಗೆ ಕರೆ ಮಾಡಿ ಖದೀಮನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೇಸಿಗೆ ಹಿನ್ನೆಲೆ ಜನರು ತಾಪ ತಾಳದೆ ಮನೆಗೆ ಬೀಗ ಹಾಕಿ ಮನೆ ಮೇಲ್ಛಾವಣಿ ಮೇಲೆ ಮಲಗುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಖದೀಮರು ಇತ್ತೀಚೆಗೆ ಬಡಾವಣೆಯಲ್ಲಿ ಸುಮಾರು 6 ಮನೆಗಳಿಗೆ ಕನ್ನ ಹಾಕಿದ್ದರು. ಕಳ್ಳರ ಕಾಟಕ್ಕೆ ಬಡಾವಣೆ ನಿವಾಸಿಗಳು ಬೇಸತ್ತು ಹೋಗಿದ್ರು. ಕಳ್ಳರಿಗಾಗಿ ಕಾಯ್ದು ಕುಳಿತಿದ್ದ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಕಳ್ಳನಿಗೆ ಬಿಸಿ ಬಿಸಿ ಕಜ್ಜಾಯ ನೀಡಿ ಪೊಲೀಸರಿಗೊಪ್ಪಿಸಿದ್ದಾರೆ. ಖದೀಮನನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.