ಕಲಬುರಗಿ:ಮೂರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಮನೆಗಳ್ಳನನ್ನು ಬಂಧಿಸುವಲ್ಲಿ ನಗರದ ಚೌಕ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಖ್ಯಾತ ಮನೆಗಳ್ಳನ ಬಂಧನ - ಕುಖ್ಯಾತ ಮನೆಗಳ್ಳ ಬಂಧನ
ಮೂರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಮನೆಗಳ್ಳನನ್ನು ಕಲಬುರಗಿಯಲ್ಲಿ ಬಂಧಿಸಲಾಗಿದೆ.
![ಕುಖ್ಯಾತ ಮನೆಗಳ್ಳನ ಬಂಧನ thief-arrest-in-kalburgi](https://etvbharatimages.akamaized.net/etvbharat/prod-images/768-512-9598997-thumbnail-3x2-news.jpg)
ಕುಖ್ಯಾತ ಮನೆಗಳ್ಳನ ಬಂಧನ
ಸುಮನ್ ಉಪಾಧ್ಯ (31) ಬಂಧಿತ ಆರೋಪಿಯಾಗಿದ್ದು. ಈತ ಹೋಟೆಲ್ವೊಂದರಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಹಲವು ದಿನಗಳಿಂದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ.
ಈತನ ಮೇಲೆ ನಗರದ ಚೌಕ್ ಪೊಲೀಸ್ ಠಾಣೆ, ಸ್ಟೇಷನ್ ಬಜಾರ ಪೊಲೀಸ್ ಠಾಣೆ, ಬ್ರಹ್ಮಪುರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಸದ್ಯ ಬಂಧಿತನಿಂದ 8 ಲಕ್ಷ 30 ಸಾವಿರ ಮೌಲ್ಯದ 166 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.