ಕರ್ನಾಟಕ

karnataka

ETV Bharat / state

ಅಟ್ಟಹಾಸ ಮೆರೆದಿದ್ದ ಪ್ರದೇಶದಲ್ಲೀಗ ಮಹಾಮಾರಿಯ ಸುಳಿವಿಲ್ಲ.. - ಇದೀಗ ಪೇಷಂಟ್ -1132 ಹಾಗೂ ಪೇಷಂಟ್ 1134 ರ ಡಿಸ್ಚಾರ್ಜ್

ಪಿ-205 ವ್ಯಕ್ತಿಗೆ ಮೋಮಿನಪುರದಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ನಂತರ ಈತನಿಂದ 23 ಜನರಿಗೂ ಸೋಂಕು ಹರಡಿತ್ತು. ಪರಿಣಾಮವಾಗಿ 55 ವರ್ಷದ ಬಟ್ಟೆ ವ್ಯಾಪಾರಿ ಏಪ್ರಿಲ್ 10ರಂದು ಮೃತಪಟ್ಟಿದ್ದ. ಅಲ್ಲದೆ ಈ ಬಡಾವಣೆಯಲ್ಲಿ ಇನ್ನಿಬ್ಬರು ಸೋಂಕಿತರು ಸಾವನ್ನಪ್ಪಿದ್ದರು.

there-is-no-corona-virus-found-in-kalburgi
ಅಟ್ಟಹಾಸ ಮೆರೆದಿದ್ದ ಪ್ರದೇಶದಲ್ಲೀಗ ಮಹಾಮಾರಿಯ ಸುಳಿವಿಲ್ಲ

By

Published : May 31, 2020, 4:21 PM IST

ಕಲಬುರಗಿ :ಜಿಲ್ಲೆಯಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದ ಮೋಮಿನಪುರದಲ್ಲಿ ಇದೀಗ ವೈರಸ್​​ ಸುಳಿವಿಲ್ಲದಂತಾಗಿದೆ. ಪರಿಣಾಮ ಇಲ್ಲಿನ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಈವರೆಗೆ ಈ ಬಡಾವಣೆಯಲ್ಲಿ ಒಟ್ಟು 43 ಜನರಿಗೆ ಸೋಂಕು ತಗಲಿದ್ದರ ಹಿನ್ನೆಲೆ ಮೂವರು ಸಾವನ್ನಪಿದ್ದಾರೆ.

ಜಿಲ್ಲೆಯಲ್ಲಿ 7 ಕೊರೊನಾ ಸಾವು ಸಂಭವಿಸಿವೆ. ಮೂರು ಜನ ಮೋಮಿನಪುರ ನಿವಾಸಿಗಳಾಗಿದ್ದರು. ಸದ್ಯ ಈ ಬಡಾವಣೆಯಲ್ಲಿ 14 ದಿನಗಳಿಂದ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಬದಲಿಗೆ ಐಸೋಲೇಷನ್ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಲವರು ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.

ಪಿ-205 ವ್ಯಕ್ತಿಗೆ ಮೋಮಿನಪುರದಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ನಂತರ ಈತನಿಂದ 23 ಜನರಿಗೂ ಸೋಂಕು ಹರಡಿತ್ತು. ಪರಿಣಾಮವಾಗಿ 55 ವರ್ಷದ ಬಟ್ಟೆ ವ್ಯಾಪಾರಿ ಏಪ್ರಿಲ್ 10ರಂದು ಮೃತಪಟ್ಟಿದ್ದ. ಅಲ್ಲದೆ ಈ ಬಡಾವಣೆಯಲ್ಲಿ ಇನ್ನಿಬ್ಬರು ಸೋಂಕಿತರು ಸಾವನ್ನಪ್ಪಿದ್ದರು.

ಏಪ್ರಿಲ್ 21 ರಂದು 80 ವರ್ಷದ ವೃದ್ಧ ಮೃತಪಟ್ಟಿದ್ದರೆ, ಮೇ 15 ರಂದು 60 ವರ್ಷದ ಪುರುಷ ಸಾವನ್ನಪ್ಪಿದ್ದ. ಸೋಂಕು ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗಳಿಗೆ ತೆರಳಿ ಯಾದೃಚ್ಛಿಕ ತಪಾಸಣೆ ಕೈಗೊಂಡಿದ್ದರು.

ಇದೀಗ ಪೇಷಂಟ್ -1132 ಹಾಗೂ ಪೇಷಂಟ್ 1134ರ ಡಿಸ್ಚಾರ್ಜ್‌ನೊಂದಿಗೆ ಈ ಪ್ರದೇಶ ಕೊರೊನಾ ಮುಕ್ತವಾಗಿದೆ. ಸದ್ಯ ಎಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು, 14 ದಿನ ಈ ಮೋಮಿನಪುರ ಬಡಾವಣೆಯಲ್ಲಿ ಯಾವುದೇ ಪ್ರಕರಣ ಪತ್ತೆಯಾಗದೆ ಹೋದಲ್ಲಿ ನಿರ್ಬಂಧಿತ ಪ್ರದೇಶದಿಂದ​ ಫ್ರೀ ಝೋನ್‌ ಆಗಿ ಮಾರ್ಪಡಲಿದೆ.

ABOUT THE AUTHOR

...view details