ಕರ್ನಾಟಕ

karnataka

ETV Bharat / state

ಬೀಗ ಹಾಕಿದ ಮನೆಗಳೇ ಇವರ ಟಾರ್ಗೆಟ್​.. ವೃದ್ಧೆ ಸೇರಿ 7 ಖತರ್ನಾಕ್ ಮನೆಗಳ್ಳರ ಗ್ಯಾಂಗ್ ಅರೆಸ್ಟ್​ - ಕಲಬುರಗಿಯಲ್ಲಿ ಮನೆಗಳ್ಳರ ಬಂಧನ ಸುದ್ದಿ

ವೃದ್ಧೆ ಬಲೂನ್ ಮಾರುವ ಸೋಗಿನಲ್ಲಿ ಬಂದು ಬೀಗ ಹಾಕಿದ ಮನೆಗಳನ್ನು ಗುರುತಿಸಿ ಗ್ಯಾಂಗ್​ನ ಇತರೆ ಸದಸ್ಯರಿಗೆ ತಿಳಿಸುತ್ತಿದ್ದಳು. ಆಗ ಆಕೆ ಜೊತೆ ಇರುವ ಇತರರು ರಾತ್ರಿ ವೇಳೆ ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣ, ಹಣ ಹಾಗೂ ಕೈಗೆ ಸಿಕ್ಕ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು..

Thefts arrested in Kalaburgi
ಕಲಬುರಗಿಯಲ್ಲಿ ಮನೆಗಳ್ಳರ ಬಂಧನ

By

Published : Jul 3, 2021, 9:25 PM IST

ಕಲಬುರಗಿ :ಹಗಲೊತ್ತಿನಲ್ಲಿ ಬಲೂನ್ ಮಾರುವ ಸೋಗಿನಲ್ಲಿ ಬಂದು ಮನೆ ಕಳ್ಳತನಕ್ಕೆ ಸ್ಕೆಚ್ ಹಾಕಿ ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಓರ್ವ ವೃದ್ಧೆ ಸೇರಿ ಏಳು ಜನ ಖತರ್ನಾಕ್ ಮನೆಗಳ್ಳರ ಗ್ಯಾಂಗ್‌ನ ಬಂಧಿಸುವಲ್ಲಿ ಕಲಬುರಗಿ ನಗರ ಚೌಕ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ವೃದ್ಧೆ ಸೇರಿ 7 ಖತರ್ನಾಕ್ ಮನೆಗಳ್ಳರ ಗ್ಯಾಂಗ್ ಅರೆಸ್ಟ್..​

ರಘು ಅಲಿಯಾಸ್ ರಘಲ್ಯಾ, ಶಿವ್ಯಾ ಅಲಿಯಾಸ್ ಶೀಲವಂತ ಕಾಳೆ, ರತ್ನಾ ಅಲಿಯಾಸ್ ರತ್ನು ಪವಾರ್, ಲಾಲು ಕಾಳೆ, ಗಣೇಶ್ ಕಾಳೆ, ಶ್ರಾವಣ ಶಿಕಾರಿ, ಕಲಾವತಿ ಗೌನ್ಯ ಬಂಧಿತ ಆರೋಪಿಗಳಾಗಿದಾರೆ. ಬಂಧಿತ ಆರೋಪಿಗಳು ಕಲಬುರಗಿ ನಗರದ ಸುವರ್ಣನಗರ, ಜೆಡಿಎ ಕಾಲೋನಿ ಸೇರಿದಂತೆ ಹಲವೆಡೆ ಕಳ್ಳತನ ಮಾಡಿ ತೆಲೆ ಮರೆಸಿಕೊಂಡು ತಿರುಗಿತ್ತಿದ್ದರು.

ಆರೋಪಿ ವೃದ್ಧೆ ಬಲೂನ್ ಮಾರುವ ಸೋಗಿನಲ್ಲಿ ಬಂದು ಬೀಗ ಹಾಕಿದ ಮನೆಗಳನ್ನು ಗುರುತಿಸಿ ಗ್ಯಾಂಗ್​ನ ಇತರೆ ಸದಸ್ಯರಿಗೆ ತಿಳಿಸುತ್ತಿದ್ದಳು. ಆಗ ಆಕೆ ಜೊತೆ ಇರುವ ಇತರರು ರಾತ್ರಿ ವೇಳೆ ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣ, ಹಣ ಹಾಗೂ ಕೈಗೆ ಸಿಕ್ಕ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಚಾಲಾಕಿ ಮನೆಗಳ್ಳರ ಗ್ಯಾಂಗ್​ಗಳನ್ನು ಬಂಧಿಸಿದ ಪೊಲೀಸರು, ಬಂಧಿತರಿಂದ ₹8 ಲಕ್ಷ ಮೌಲ್ಯದ 163 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ ಹಾಗೂ ಎರಡು ನಾಲ್ಕು ಚಕ್ರದ ವಾಹನ ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details