ಕಲಬುರಗಿ : ಜಂಗಮಶೆಟ್ಟಿ ಸ್ಮರಣಾರ್ಥವಾಗಿ ಪ್ರತಿವರ್ಷ ಕೊಡಮಾಡುವ ಎಸ್.ಬಿ.ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ ಸಮಾರಂಭವು ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಆಯೋಜಿಸಲಾಗಿತ್ತು.
ರಂಗಕರ್ಮಿ ಶ್ರೀಪಾದ ಭಟ್ಗೆ ಒಲಿದ ಎಸ್.ಬಿ.ಜಂಗಮಶೆಟ್ಟಿ ಪ್ರಶಸ್ತಿ - kannada news
ಪ್ರತಿವರ್ಷ ರಂಗ ಕಲಾವಿದರಿಗೆ ಕೊಡಮಾಡುವ ಪ್ರಸಿದ್ದ ಎಸ್.ಬಿ.ಜಂಗಮಶೆಟ್ಟಿ ಪ್ರಶಸ್ತಿಯನ್ನು, ಪ್ರತಿಭಾವಂತ ನಿರ್ದೇಶಕ, ನಾಟಕಕಾರ, ರಂಗಕರ್ಮಿ ಶ್ರೀಪಾದ ಭಟ್ ಅವರಿಗೆ ನೀಡಲಾಯಿತು.
![ರಂಗಕರ್ಮಿ ಶ್ರೀಪಾದ ಭಟ್ಗೆ ಒಲಿದ ಎಸ್.ಬಿ.ಜಂಗಮಶೆಟ್ಟಿ ಪ್ರಶಸ್ತಿ](https://etvbharatimages.akamaized.net/etvbharat/prod-images/768-512-3882441-thumbnail-3x2-award.jpg)
ರಂಗ ಸಂಗಮ ಕಲಾವೇದಿಕೆ ವತಿಯಿಂದ ಪ್ರತಿವರ್ಷ ರಂಗ ಕಲಾವಿದರಿಗೆ ಕೊಡಮಾಡುವ ಪ್ರಸಿದ್ದ ಎಸ್.ಬಿ.ಜಂಗಮಶೆಟ್ಟಿ ಪ್ರಶಸ್ತಿ ಕಾರ್ಯಕ್ರಮಕ್ಕೆ ಹಿರಿಯ ರಂಗಕರ್ಮಿ ಪ್ರಕಾಶ ಬೆಳವಾಡಿ ಚಾಲನೆ ನೀಡಿದರು. ಈ ಬಾರಿಯ ಪ್ರಶಸ್ತಿಗೆ ಭಾಜನರಾದ ಪ್ರತಿಭಾವಂತ ನಿರ್ದೇಶಕ, ನಾಟಕಕಾರ, ರಂಗಕರ್ಮಿ ಶ್ರೀಪಾದ ಭಟ್ ಅವರಿಗೆ ಜಂಗಮಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಿರಿಯ ಸಾಹಿತಿ ಸ್ವಾಮಿರಾವ್ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ಕಲಾವಿದ ಎಲ್.ಬಿ.ಕೆ.ಆಲ್ದಾಳ , ರಂಗಸಂಗಮ ಕಲಾವೇದಿಕೆ ಸಂಸ್ಥಾಪಕಿ ಸುಜಾತಾ ಜಂಗಮಶೆಟ್ಟಿ, ಸಾಹಿತಿ ಮಣಿಪಾಲರೆಡ್ಡಿ ಮುನ್ನೂರು ಸೇರಿದಂತೆ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.