ಕಲಬುರಗಿ: ಸೀಮೆಎಣ್ಣೆ ಸುರಿದುಕೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲುಬುರಗಿಯ ಸಿಟಿ ಸೆಂಟ್ರಲ್ ಮಾಲ್ನಲ್ಲಿ ನಡೆದಿದೆ.
ಕಲಬುರಗಿ ಸಿಟಿ ಸೆಂಟ್ರಲ್ ಮಾಲ್ನಲ್ಲಿ ಸೀಮೆಎಣ್ಣೆ ಸುರಿದುಕೊಂಡು ಯುವತಿ ಆತ್ಮಹತ್ಯೆ - ಯುವತಿ ಆತ್ಮಹತ್ಯೆ
ಸಿಟಿ ಸೆಂಟ್ರಲ್ ಮಾಲ್ನಲ್ಲಿರುವ ವಿಜಯಲಕ್ಷ್ಮಿ ಸಿಲ್ಕ್ ಸ್ಯಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮಾಲ್ ಬಾತ್ ರೂಮ್ನಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಯುವತಿ ಆತ್ಮಹತ್ಯೆ
ಸಂಗಮೇಶ್ವರ ಕಾಲೋನಿಯ ನಾಗರತ್ನ ಹಿರೇಮಠ (20) ಆತ್ಮಹತ್ಯೆಗೆ ಶರಣಾದ ಯುವತಿ ಎನ್ನಲಾಗಿದೆ. ನಾಗರತ್ನ ಸಿಟಿ ಸೆಂಟ್ರಲ್ ಮಾಲ್ನಲ್ಲಿರುವ ವಿಜಯಲಕ್ಷ್ಮಿ ಸಿಲ್ಕ್ ಸ್ಯಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಮಾಲ್ ಬಾತ್ ರೂಮ್ನಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.