ಕರ್ನಾಟಕ

karnataka

ETV Bharat / state

ವೋಟರ್ ಲಿಸ್ಟ್ ನಿಂದ ಮತದಾರರ ಹೆಸರು ಡಿಲಿಟ್ ಕಲಬುರಗಿಯಲ್ಲೂ ಯತ್ನ, ಕಾಂಗ್ರೆಸ್​ ಆರೋಪ - ವೋಟರ್ ಲಿಸ್ಟ್ ನಿಂದ ಮತದಾರರ ಹೆಸರು ಡಿಲಿಟ್

ಬೇರೆ ರಾಜ್ಯದ ಮೊಬೈಲ್ ನಂಬರ್​ನಿಂದ ವೋಟರ್ ಐಡಿ ಡಿಲಿಟ್ ಮಾಡುವಂತೆ ಆನ್ ಲೈನ್​​​ದಿಂದ ಬಿಎಲ್​​​​ಒ ಗಳಿಗೆ ಮೆಸೇಜ್​​ - ಆಳಂದ ಕ್ಷೇತ್ರದ ಬಿಜೆಪಿ ಶಾಸಕ ಅವರ ಕೈವಾಡ ಇರಬಹುದು, ಮತದಾರರಿಂದ ತಹಸೀಲ್ದಾರ್​ಗೆ ದೂರು: ಕಾಂಗ್ರೆಸ್​​​ನ ಬಿ ಆರ್ ಪಾಟೀಲ್ ಆರೋಪ.

Press conference by KPCC spokesperson MLA Priyanka Kharge, BR Patil.
ಕೆಪಿಸಿಸಿ ವಕ್ತಾರ ಶಾಸಕ ಪ್ರೀಯಾಂಕ ಖರ್ಗೆ, ಬಿ ಆರ್ ಪಾಟೀಲ್ ಅವರಿಂದ ಸುದ್ದಿಗೋಷ್ಠಿ

By

Published : Feb 11, 2023, 6:42 PM IST

ಕಲಬುರಗಿ: ಬೆಂಗಳೂರು ನಂತರ ಕಲಬುರಗಿಯಲ್ಲಿ ವೋಟರ್ ಲಿಸ್ಟ್​ನಿಂದ ಮತದಾರರ ಹೆಸರು ಡಿಲಿಟ್ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ರಾಜ್ಯಾದ್ಯಂತ ಸದ್ದು ಮಾಡಿದ್ದ ಬೆಂಗಳೂರಿನ ಚಿಲುಮೆ ಸಂಸ್ಥೆಯಲ್ಲಿ ನಡೆದ ವೋಟರ್ ಲಿಸ್ಟ್ ನಿಂದ ಮತದಾರರ ಹೆಸರು ಡಿಲಿಟ್ ಪ್ರಕರಣದ ಬಳಿಕ, ಈಗ ಆಳಂದ ಕ್ಷೇತ್ರದಲ್ಲೂ ಮತದಾರರ ಹೆಸರನ್ನು ಡಿಲಿಟ್ ಮಾಡಲು ಹುನ್ನಾರ ನಡೆದಿರೋ ಶಂಕೆ ಇದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮತದಾರರ ಹೆಸರು ಡಿಲಿಟ್ ಮಾಡಿರುವ ಆರೋಪ:ಕಾಂಗ್ರೆಸ್ ಮತದಾರರನ್ನು ವೋಟರ್ ಲಿಸ್ಟ್​ನಿಂದ ಡಿಲಿಟ್ ಮಾಡಲು ಬಿಜೆಪಿ ಅವರು ಅಂದ್ರೇ ಸ್ಥಳೀಯ ಶಾಸಕರು ಸಂಚು ನಡೆಸಿದ್ದಾರೆ ಎಂದು ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಬಿ ಆರ್ ಪಾಟೀಲ್ ಆರೋಪ ಮಾಡಿದ್ದಾರೆ. ಈ ಆರೋಪದಿಂದ ಈಗ ಕಲಬುರಗಿಯ ಆಳಂದ ವಿಧಾನಸಭೆ ಕ್ಷೇತ್ರದಲ್ಲಿ ಇಂತಹದೊಂದು ಸಂಶಯ ಶುರುವಾಗಿದೆ.

ಬಿಎಲ್ಒಗಳಿಗೆ ಮೆಸೇಜ್​​: ಆಳಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲಿಟ್ ಮಾಡಲು ಹುನ್ನಾರ ನಡೆದಿರೋ ಆರೋಪ ಕೇಳಿ ಬಂದಿದೆ. ಬಿಹಾರ, ರಾಜಸ್ಥಾನ, ಜಾರ್ಖಂಡ್ ಸೇರಿ ಬೇರೆ ರಾಜ್ಯಗಳ ಮೊಬೈಲ್ ನಂಬರ್​​​ನಿಂದ ಆಳಂದ ಕ್ಷೇತ್ರದ ಮತದಾರರ ಹೆಸರುಗಳನ್ನು ಡಿಲಿಟ್ ಮಾಡುವಂತೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಮೆಸೇಜ್​​ ಬಿಎಲ್ಒಗಳಿಗೆ ಬಂದಿದೆಯಂತೆ.

ಆದ್ರೆ ಸ್ಥಳೀಯರ ಹೆಸರಿನಿಂದ ಮೇಲೆ ಅನ್ಯ ರಾಜ್ಯದ ಮೊಬೈಲ್ ನಂಬರ್​​​ಗಳನ್ನು ಬಳಸಿಕೊಂಡು ಆನ್ ಲೈನ್ ಮೂಲಕ ಮತದಾರರ ಪಟ್ಟಿಯಿಂದ ಡಿಲಿಟ್ ಮಾಡುವಂತೆ ಅರ್ಜಿ ಸಲ್ಲಿಸಲಾಗಿದೆ. ಆದ್ರೆ ಅರ್ಜಿದಾರರನ್ನು ಪರಿಶೀಲಿಸಿದ್ದಾಗ ಅವರು ವೋಟ್ ಡಿಲಿಟ್ ಗೆ ಅರ್ಜಿಯೇ ಸಲ್ಲಿಸಿಲ್ಲವಂತೆ.

ಕಾಂಗ್ರೆಸ್​​​ನಿಂದ ಮಾಧ್ಯಮಗೋಷ್ಠಿ: ಆಳಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ 6,670 ಮತದಾರರು ಬೇರೇಡೆ ಸ್ಥಳಾಂತರ ಆಗಿದ್ದಾರೆ. ಹೀಗಾಗಿ ಅವರ ವೋಟರ್ ಐಡಿ ಡಿಲಿಟ್ ಮಾಡುವಂತೆ ಆನ್ ಲೈನ್ ಮೂಲಕ ಬಿಎಲ್ಓ ಗಳಿಗೆ ಮೆಸೇಜ್​ ಬಂದಿವೆ‌ಯಂತೆ. ವೋಟರ್ ಐಡಿ ಡಿಲಿಟ್ ಸಂಚಿನ ಬಗ್ಗೆ ಕಲಬುರಗಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿರುವ ಆಳಂದ ಕ್ಷೇತ್ರದ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಬಿ ಆರ್ ಪಾಟೀಲ್, ಕಾಂಗ್ರೆಸ್ ಮತದಾರರ ವೋಟರ್​ಗಳನ್ನು ಡಿಲಿಟ್ ಮಾಡಲು ಬಿಜೆಪಿ ಹುನ್ನಾರ ಇದೆ‌ ಎಂದು ಆರೋಪಿಸಿದರು.

ಡಿಲಿಟ್​ ವಿರುದ್ಧ ಪಾಟೀಲ್ ದೂರು: ಸ್ಥಳೀಯ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ ಅವರ ಕೈವಾಡ ಇರಬಹುದು, ಅವರೇ ಈ ಕೆಲಸ ಮಾಡಿಸಿರಬಹುದು ಎಂದು ಮಾಜಿ ಶಾಸಕ ಬಿ ಆರ್​ ಪಾಟೀಲ್​ ಗಂಭೀರ ಆರೋಪ ಮಾಡಿದ್ದಾರೆ. ವೋಟರ್ ಐಡಿ ಡಿಲಿಟ್ ಸಂಚಿನ ಕುರಿತು ಮಾಜಿ ಶಾಸಕರು ಭಾರತ ಚುನಾವಣಾ ಆಯೋಗ ಆಯುಕ್ತರು, ಮತ್ತು ಕಾರ್ಯದರ್ಶಿ ಗಳಿಗೆ ದೂರು ನೀಡಿದ್ದಾರೆ.
ಹೆಸರು ಡಿಲಿಟ್ ಆಗಿದ್ದ ಮತದಾರರಿಂದಲೂ ದೂರು:ಇನ್ನು ಆಳಂದ ಕ್ಷೇತ್ರದ ಸರಸಂಬಾ ಗ್ರಾಮದ ಸೂರ್ಯಕಾಂತ್ ಗೋವಿನ್ ಎನ್ನುವವರ ವೋಟರ್ ಐಡಿಯನ್ನು ಡಿಲಿಟ್ ಮಾಡುವಂತೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಲು ಸೂರ್ಯಕಾಂತ್ ಹೆಸರು ಬಳಸಲಾಗಿದೆ. ಆದ್ರೆ ಮೊಬೈಲ್ ನಂಬರ್ ಬೇರೆ ರಾಜ್ಯದಿದೆ. ಈ ಬಗ್ಗೆ ಮತದಾರ ಸೂರ್ಯಕಾಂತ್ ಕೋವಿನ್ ಆಳಂದ ತಹಸೀಲ್ದಾರ್ ಗೆ ದೂರು ಸಲ್ಲಿಸಿದ್ದಾರೆ. ಲಕ್ಷ್ಮೀ ಎನ್ನುವ ಮಹಿಳೆ ಹೆಸರಿನಲ್ಲಿ, ಅನ್ಯ ರಾಜ್ಯದ ಮೊಬೈಲ್ ಸಂಖ್ಯೆ ಬಳಸಿ ಬರೋಬ್ಬರಿ 70 ಜನರ ವೋಟರ್ ಐಡಿ ಡಿಲಿಟ್ ಗೆ ಅರ್ಜಿ ಸಲ್ಲಿಕೆಯಾಗಿದೆ. ಸ್ಥಳ ಬದಲಾವಣೆ ಮೂಲಕ ವೋಟರ್ ಐಡಿ ಡಿಲಿಟ್ ಗೆ ಅರ್ಜಿ ಸಲ್ಲಿಯೆಯಾಗಿವೆ ಎಂದು ದಾಖಲೆ ಸಮೇತ್ ಬಿ ಆರ್ ಪಾಟೀಲ್ ಆರೋಪ ಮಾಡಿದ್ದಾರೆ.

ಚುನಾವಣೆ ಆಯೋಗಕ್ಕೆ ಕಾಂಗ್ರೆಸ್​​​ನಿಂದ ದೂರು: ಕೆಪಿಸಿಸಿ ವಕ್ತಾರ ಶಾಸಕ ಪ್ರೀಯಾಂಕ ಖರ್ಗೆ ಮಾತನಾಡಿ, ವೋಟರ್ ಐಡಿ ಡಿಲಿಟ್ ಸಂಚಿನ ಹಿಂದೆ ಬಿಜೆಪಿ ಕೈವಾಡ ಇದೆ. ಸೋಲಿನ ಭೀತಿಯಿಂದ ಈ ರೀತಿ ವಾಮಮಾರ್ಗ ಹಿಡಿಯುತ್ತಿದ್ದಾರೆ. ಆಳಂದ ಅಷ್ಟೇ ಅಲ್ಲ ಬೇರೆ ಕ್ಷೇತ್ರಗಳಲ್ಲೂ ಆಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸೋಮವಾರ ಅಥವಾ ಮಂಗಳವಾರ ಈ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್​ ಪಕ್ಷದಿಂದ ದೂರು ಕೊಡುವುದಾಗಿ ತಿಳಿಸಿದ್ದಾರೆ.

ಈ ಮತದಾರರ ಐಡಿ ಡಿಲಿಟ್ ಮೇಸೆಜ್‌ ಗಳಿಂದ ಬಿಎಲ್ಒ ಗಳು ವೋಟರ್ ಐಡಿ‌ ಡಿಲಿಟ್ ಕೂಡ ಮಾಡಬಹುದು ಅಥವಾ ಪುನರ್ ಪರಿಶೀಲನೆ ಮಾಡಲು ಅವಕಾಶ ಇದೆ. ಆದರೆ ಬಿಎಲ್​ಒ ಗಳು ಪರಿಶೀಲನೆ ಮಾಡದೇ ಮತದಾರರ ಹೆಸರು ಡಿಲಿಟ್ ಮಾಡಬಹುದು ಅನ್ನೋ ಆತಂಕ ಬಿ ಆರ್ ಪಾಟೀಲ್ ಗೆ ಶುರುವಾಗಿದೆ. ಒಟ್ಟಿನಲ್ಲಿ ದಾಖಲೆಗಳ ಪ್ರಕಾರ ಆಳಂದ ಕ್ಷೇತ್ರದಲ್ಲಿ ಮತದಾರರ ವೋಟರ್ ಐಡಿ ಡಿಲಿಟ್ ಮಾಡಲು ವ್ಯವಸ್ಥಿತವಾಗಿ ಜಾಲ ಕಾರ್ಯಾಚರಣೆ ನಡೆಸ್ತಿರೋ ಶಂಕೆ ವ್ಯಕ್ತವಾಗಿದೆ. ಬಿಜೆಪಿ ಮೇಲೆಯೇ ವೋಟರ್ ಐಡಿ ಡಿಲಿಟ್ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆದ್ರಷ್ಟೇ ವಾಸ್ತವ ಸತ್ಯ ಬಯಲಿಗೆ ಬರಲಿದೆ.

ಇದನ್ನೂಓದಿ:ರಂಗೇರಿದ ಚಾಮರಾಜನಗರ ಚುನಾವಣಾ ಅಖಾಡ: ಈ ಬಾರಿ ಕಣದಲ್ಲಿ ಅರ್ಚಕ, ಎಂಜಿನಿಯರ್, ಯೋಧ, ರೈತರು..!

ABOUT THE AUTHOR

...view details