ಸೇಡಂ :ಸುಮಾರು 28-30 ವಯಸ್ಸಿನ ಮಹಿಳೆಯೋರ್ವಳು ಗಾಯಗೊಂಡ ಸ್ಥಿತಿಯಲ್ಲಿ ತಾಲೂಕಿನ ಮಳಖೇಡ ರೈಲು ನಿಲ್ದಾಣದಲ್ಲಿ ಕೆಲ ದಿನಗಳ ಹಿಂದೆ ಕಂಡು ಬಂದಿದ್ದಳು. ಇದನ್ನು ಗಮನಿಸಿದ ಗ್ರಾಮಸ್ಥರು ವಿಚಾರಿಸಲಾಗಿ, ಮಹಾರಾಷ್ಟ್ರದ ಔರಂಗಾಬಾದ ನಿವಾಸಿ ಎಂದು ತಿಳಿದು ಬಂದಿತ್ತು. ಅಲ್ಲದೆ ಕೆಲವರಿಂದ ಥಳಿತಕ್ಕೆ ಒಳಪಟ್ಟು, ಮಳಖೇಡ ರೈಲು ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.
ಸಾಂತ್ವನ ಕೇಂದ್ರಕ್ಕೆ ದಾಖಲಿಸಿ ಅನಾಥ ಮಹಿಳೆಗೆ ಆಶ್ರಯ ಕಲ್ಪಿಸಿದ ಗ್ರಾಮಸ್ಥರು - The villagers who helped
ಮಹಾರಾಷ್ಟ್ರದ ಔರಂಗಾಬಾದನ ಮಹಿಳೆಯೋರ್ವಳು ಗಾಯಗೊಂಡ ಸ್ಥಿತಿಯಲ್ಲಿ ಮಳಖೇಡ ರೈಲು ನಿಲ್ದಾಣದಲ್ಲಿ ಕೆಲ ದಿನಗಳ ಹಿಂದೆ ಕಂಡು ಬಂದಿದ್ದಳು. ಸ್ಥಳೀಯ ಪೊಲೀಸರ ಸಹಾಯದಿಂದ ಮಹಿಳೆಯನ್ನು ಕಲಬುರಗಿಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ದಾಖಲಿಸಲಾಗಿದೆ..
ಸಾಂತ್ವನ
ಇದೀಗ ಸ್ಥಳೀಯ ಪೊಲೀಸರ ಸಹಾಯದಿಂದ ಮಹಿಳೆಯನ್ನು ಕಲಬುರಗಿಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ದಾಖಲಿಸಲಾಗಿದೆ. ಮಹಿಳೆಯನ್ನು ರಕ್ಷಿಸುವ ಮೂಲಕ ಮಳಖೇಡನ ರಾಜು ಕಟ್ಟಿ ಹಾಗೂ ಇತರರು ಮಾನವೀಯತೆ ಮೆರೆದಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆರತಿ ಕುಲಕರ್ಣಿ, ರಹಮಾನ್ ಉಮರ್ ಅವರು ಮಹಿಳೆಯನ್ನು ಸಾಂತ್ವನ ಕೇಂದ್ರಕ್ಕೆ ದಾಖಲಿಸಲಾಗಿದೆ.