ಕಲಬುರಗಿ: ಜಿಲ್ಲೆಯ ರಾವೂರ್ ಗ್ರಾಮದ ಸಚ್ಚಿದಾನಂದ ಶಿಕ್ಷಣ ಸಂಸ್ಥೆ ಒಂದು ದಿನ ಮಕ್ಕಳಿಗೆ ಬೋಧನೆ ಮಾಡುವಂತೆ ಅವಕಾಶ ಕಲ್ಪಿಸಿಕೊಟ್ಟಿದೆ.
ಮಕ್ಕಳ ದಿನಾಚರಣೆಯಂದು ಇಲ್ಲಿ ವಿದ್ಯಾರ್ಥಿಗಳೇ ಶಿಕ್ಷಕರು! - ಮಕ್ಕಳ ದಿನಾಚರಣೆ ಸಂಭ್ರಮ
ಕಲಬುರಗಿಯ ಶಾಲೆಯೊಂದರಲ್ಲಿ ಮಕ್ಕಳಿಗೆ ಆಡಳಿತ ನೀಡಿ, ಬೋಧನೆ ಮಾಡುವಂತೆ ಅವಕಾಶ ಕಲ್ಪಿಸಿಕೊಡುವ ಮೂಲಕ ವಿಶೇಷವಾಗಿ ಮಕ್ಕಳ ದಿನಾಚರಣೆ ಆಚರಿಸಿದೆ.
![ಮಕ್ಕಳ ದಿನಾಚರಣೆಯಂದು ಇಲ್ಲಿ ವಿದ್ಯಾರ್ಥಿಗಳೇ ಶಿಕ್ಷಕರು!](https://etvbharatimages.akamaized.net/etvbharat/prod-images/768-512-5063609-thumbnail-3x2-brm.jpg)
ವಿದ್ಯಾರ್ಥಿಗಳಿಗೆ ಬೋಧನೆಯ ಅವಕಾಶ
ವಿದ್ಯಾರ್ಥಿಗಳಿಗೆ ಬೋಧನಾ ಅವಕಾಶ ನೀಡಿದ ಶಾಲೆ
ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಲ್ಲಿ ಬೋಧನಾ ಕೌಶಲ್ಯ ಹೆಚ್ಚಿಸುವುದು ಹಾಗೂ ಮುಂಬರುವ ದಿನಗಳಲ್ಲಿ ಆಡಳಿತ ಬಗ್ಗೆ ಧೈರ್ಯ ತುಂಬುವ ಉದ್ದೇಶದಿಂದ ಸಚ್ಚಿದಾನಂದ ಶಾಲೆ ಇಂತಹ ಒಂದು ಪ್ರಯತ್ನ ನಡೆಸಿದೆ. ಬೆಳಿಗ್ಗೆ ಎಂದಿನಂತೆ ಪ್ರಾಥನೆ ಮುಗಿಸಿ ತರಗತಿಗೆ ಹೋಗಿ ಪಾಠ ಮಾಡುವುದರ ಜೊತೆ ಪಠ್ಯದ ಕುರಿತು ವಿವರಿಸಿದ್ದಾರೆ.
ಶಾಲೆಯ ಈ ಕಾರ್ಯದಿಂದ ನಮಗೆ ಬೋಧನೆಯ ಕುರಿತು ಕೌಶಲ್ಯ ಮತ್ತು ಆಡಳಿತ ಮಂಡಳಿ ಹೇಗೆ ನಡೆಸುವುದು ಎಂಬ ತಿಳುವಳಿಕೆ ಸಿಕ್ಕಂತಾಗುತ್ತದೆ. ನಮ್ಮ ಪ್ರತಿಭೆಯನ್ನು ಹೊರಹಾಕುವ ಸದವಕಾಶ ಇದಾಗಿದೆ ಎಂದು ಇಲ್ಲಿನ ವಿದ್ಯಾರ್ಥಿಗಳು ಶಾಲೆಯ ಆಡಳಿತ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.