ಕರ್ನಾಟಕ

karnataka

ETV Bharat / state

ಮಳೆರಾಯನ ಅಬ್ಬರಕ್ಕೆ ಕುಸಿದ ರಾಷ್ಟ್ರಕೂಟರ ಕಾಲದ ಕಟ್ಟಡದ ಗೋಡೆ... - sedam wall collapsed news

ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿ ರಾಷ್ಟ್ರಕೂಟರ ಕಾಲದ ಗೋಡೆಯೊಂದು ಮಳೆರಾಯನ ಅಬ್ಬರಕ್ಕೆ ಕುಸಿದಿದೆ.

sedam
ಕುಸಿದ ರಾಷ್ಟ್ರಕೂಟರ ಕಾಲದ ಕಟ್ಟಡದ ಗೋಡೆ

By

Published : Sep 27, 2020, 10:12 PM IST

ಸೇಡಂ: ತಾಲೂಕಿನ ಮುಧೋಳ ಗ್ರಾಮದಲ್ಲಿ ರಾಷ್ಟ್ರಕೂಟರ ಕಾಲದ ಗೋಡೆಯೊಂದು ಮಳೆರಾಯನ ಅಬ್ಬರಕ್ಕೆ ಕುಸಿದಿದೆ.

ಮಳೆಗೆ ರಾಷ್ಟ್ರಕೂಟರ ಕಾಲದ ಕಟ್ಟಡದ ಗೋಡೆ ಕುಸಿದು ಬಿದ್ದಿದೆ

ಸತತ ಮೂರ‍್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಕೋಟೆಯಂತಿರುವ ಕಟ್ಟಡದ ಒಂದು ಭಾಗ ಸಂಪೂರ್ಣ ನೆಲಸಮವಾಗಿದ್ದು, ಪಕ್ಕದಲ್ಲೇ ಇರುವ ವಿದ್ಯುತ್ ಪರಿವರ್ತಕಕ್ಕೂ ತಾಗಿದೆ. ಆದರೆ ಯಾವುದೇ ರೀತಿಯ ಜೀವಹಾನಿಯಾಗಿಲ್ಲ ಎಂದು ವರದಿಯಾಗಿದೆ.

ಇನ್ನು ಪುರಾತನ ಗೋಡೆ ಕುಸಿದದ್ದನ್ನು ಕಂಡ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ABOUT THE AUTHOR

...view details