ಕಲಬುರಗಿ: ಈರುಳ್ಳಿ ಬೆಲೆ ಗಗನಕ್ಕೆ ಮುಟ್ಟಿದ್ದು, ಗ್ರಾಹಕರ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ. ಅದರಲ್ಲೂ ಗೃಹಿಣಿಯರಿಗಂತೂ ಈರುಳ್ಳಿ ಬೆಲೆ ಏರಿಕೆ ತಲೆ ಬಿಸಿಯಾಗಿ ಪರಿಣಮಿಸಿದೆ.
ಈರುಳ್ಳಿ ಅಲ್ಲ ಕಣ್ಣಲ್ಲಿ "ನೀರು"ಳ್ಳಿ... ಗೃಹಿಣಿಯರು ಹೇಳಿದ್ದೇನು ಗೊತ್ತಾ!? - Onion News For Kalaburagi
ಈರುಳ್ಳಿ ಬೆಲೆ ಗಗನಕ್ಕೆ ಮುಟ್ಟಿದ್ದು, ಗ್ರಾಹಕರ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ. ಅದರಲ್ಲೂ ಗೃಹಿಣಿಯರಿಗಂತೂ ಈರುಳ್ಳಿ ಬೆಲೆ ಏರಿಕೆ ತಲೆ ಬಿಸಿಯಾಗಿ ಪರಿಣಮಿಸಿದೆ.
![ಈರುಳ್ಳಿ ಅಲ್ಲ ಕಣ್ಣಲ್ಲಿ "ನೀರು"ಳ್ಳಿ... ಗೃಹಿಣಿಯರು ಹೇಳಿದ್ದೇನು ಗೊತ್ತಾ!? ಈರುಳ್ಳಿ ಕೊಳ್ಳಲು ಹೋದ್ರೆ ಕಣ್ಣಿಲ್ಲಿ "ನೀರು"ಳ್ಳಿ](https://etvbharatimages.akamaized.net/etvbharat/prod-images/768-512-5220782-thumbnail-3x2-d.jpg)
ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ. ಈಗಾಗಲೇ ಕೆಜಿ ಈರುಳ್ಳಿ ಬೆಲೆ 100-150 ರೂಪಾಯಿಗೆ ತಲುಪಿದೆ. ಹೀಗೆ ಆದರೆ ಜೀವನ ಸಾಗಿಸುವುದು ಹೇಗೆ?. ಮಾರುಕಟ್ಟೆಗೆ 500 ರೂ. ತೆಗೆದುಕೊಂಡು ಹೋದರೆ ಈರಳ್ಳಿ ತೆಗೆದುಕೊಳ್ಳುವುದಕ್ಕೆ ಅಷ್ಟು ಹಣ ಹೋಗುತ್ತದೆ. ಹೀಗೆ ಆದರೆ ಬಡವರು ಬದುಕುವುದು ಹೇಗೆ ಎಂದು ಮಹಿಳೆಯರು ಸರ್ಕಾರವನ್ನು ಪ್ರಶ್ನಿಸಿದರು.
ಆಹಾರ ತಯಾರಿಸಲು ಪ್ರತಿ ಪದಾರ್ಥಕ್ಕೂ ಈರುಳ್ಳಿ ಅವಶ್ಯವಾಗಿ ಬೇಕು. ಆದರೆ ದಿನದಂದ ದಿನಕ್ಕೆ ಈರುಳ್ಳಿ ಬೆಲೆ ಏರುತ್ತಾ ಹೋದರೆ ತುಂಬಾ ತೊಂದರೆಯಾಗುತ್ತೆ. ಆದ್ದರಿಂದ ಸರ್ಕಾರ ಈರುಳ್ಳಿ ಬೆಲೆ ಕಡಿಮೆಗೊಳಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಗೃಹಿಣಿಯರು ಒತ್ತಾಯಿಸಿದ್ದಾರೆ.