ಕರ್ನಾಟಕ

karnataka

ETV Bharat / state

ಸಂಚಾರ ದಟ್ಟಣೆ ನಿಯಂತ್ರಿಸಲು ಖುದ್ದು ಫೀಲ್ಡಿಗಿಳಿದ ಪೊಲೀಸ್​ ಕಮಿಷನರ್​​ - ಸಂಚಾರ ದಟ್ಟಣೆ ನಿಯಂತ್ರಿಸಲು ಖುದ್ದು ಫೀಲ್ಡಿಗಿಳಿದ ಪೊಲೀಸ್​ ಕಮಿಷನರ್​​

ಕಲಬುರಗಿ ನಗರದಲ್ಲಿ ಇತ್ತೀಚೆಗೆ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ಶುಕ್ರವಾರ ನಗರದ ಪೊಲೀಸ್​ ಆಯುಕ್ತ ವೈ.ಎಸ್. ರವಿಕುಮಾರ್ ಫೀಲ್ಡಿಗಿಳಿದು, ಸಂಚಾರ ದಟ್ಟಣೆ ನಿಯಂತ್ರಿಸಿದರು.

police commissioner personally entered the field to control the traffic
ಸಂಚಾರ ದಟ್ಟಣೆ ನಿಯಂತ್ರಿಸಲು ಖುದ್ದು ಫೀಲ್ಡಿಗಿಳಿದ ಪೊಲೀಸ್​ ಕಮಿಷನರ್​​

By

Published : Jul 15, 2022, 8:16 PM IST

ಕಲಬುರಗಿ: ನಗರದಲ್ಲಿ ಹೆಚ್ಚಾಗಿರುವ ಸಂಚಾರ ದಟ್ಟಣೆ ತಪ್ಪಿಸಲು ಖುದ್ದು ಕಲಬುರಗಿ ‌ನಗರದ ಪೊಲೀಸ್​ ಆಯುಕ್ತ ವೈ.ಎಸ್. ರವಿಕುಮಾರ್ ಫೀಲ್ಡಿಗಿಳಿದಿದ್ದಾರೆ. ನಗರದ ರೈಲ್ವೆ ಸ್ಟೇಷನ್, ಸೂಪರ್ ಮಾರ್ಕೆಟ್ ಸೇರಿ ಹಲವೆಡೆ ಸಿಟಿ ರೌಂಡ್ಸ್​​ ನಡೆಸಿದ ಕಮಿಷನರ್ ಸಂಚಾರ ನಿಯಂತ್ರಿಸಿದರು.

ಇತ್ತೀಚೆಗೆ ನಗರದಲ್ಲಿ ಸಂಚಾರ ದಟ್ಟನೆ ಹೆಚ್ಚಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳ ಸಹಯೋಗದೊಂದಿಗೆ ರೈಲ್ವೆ ನಿಲ್ದಾಣದ ಬಳಿ ರಸ್ತೆ ಬಂದಿಯಲ್ಲಿ ಹಾಕಲಾದ ಅನಧಿಕೃತ ಪಾನಿಪೂರಿ, ಭಜ್ಜಿ, ಟೀ ಅಂಗಡಿಗಳನ್ನು ತೆರವುಗೊಳಿಸಿ, ಸಂಚಾರಕ್ಕೆ ಅಡಚಣೆ ಮಾಡದಂತೆ ವ್ಯಾಪಾರಿಗಳಿಗೆ ವಾರ್ನಿಂಗ್​ ಕೊಟ್ಟರು.

ಸಂಚಾರ ದಟ್ಟಣೆ ನಿಯಂತ್ರಿಸಲು ಖುದ್ದು ಫೀಲ್ಡಿಗಿಳಿದ ಪೊಲೀಸ್​ ಕಮಿಷನರ್​​

ಇನ್ನು ರಸ್ತೆ ಮೇಲೆ ಬೇಕಾಬಿಟ್ಟಿ ನಿಲ್ಲಿಸುವ ವಾಹನಗಳನ್ನು ಪಾರ್ಕಿಂಗ್ ಸ್ಥಳದಲ್ಲೇ ಪಾರ್ಕ್​ ಮಾಡುವಂತೆ ಸೂಚಿಸಿದರು‌. ಆಟೋ ಚಾಲಕರಿಗೂ ಸಹ ರಸ್ತೆ ಮಧ್ಯದಲ್ಲಿ ಎಲ್ಲದರಲ್ಲಿ ಆಟೋಗೆ ಬ್ರೇಕ್ ಹಾಕಿ ಪ್ಯಾಸೆಂಜರ್ ಹತ್ತಿಸುವಂತಿಲ್ಲ. ರಸ್ತೆ ಬದೀಯಲ್ಲಿ ನಿಲ್ಲಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ್ರೆ, ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು‌. ಈ ವೇಳೆ, ಸಂಚಾರಿ ಪೊಲೀಸ್ ವಿಭಾಗದ ಎಸಿಪಿ ಸುಧಾ ಆದಿ, ಸಿಪಿಐಗಳಾದ ಶಾಂತಿನಾಥ, ಗಂಗಾಧರ ಹೀರೆಮಠ್ ಸೇರಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಇದ್ದರು.

ಇದನ್ನೂ ಓದಿ:ಹುಬ್ಬಳ್ಳಿ: ಪರಿಹಾರ ನೀಡದ ಸಾರಿಗೆ ಸಂಸ್ಥೆ.. ಐರಾವತ ಬಸ್​ ಜಪ್ತಿ !

For All Latest Updates

TAGGED:

ABOUT THE AUTHOR

...view details