ಕಲಬುರಗಿ:ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಡಿಎಸ್ಎಸ್ ಕಾರ್ಯಕರ್ತರು ಡಿಸಿಎಂ ಗೋವಿಂದ ಕಾರಜೋಳ ಬಳಿ ಬಂದಿದ್ದು, ಮನವಿ ಸ್ವೀಕರಿಸಿಲ್ಲ ಎಂದು ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಡಿಸಿಎಂ ವಿರುದ್ಧ ಪ್ರತಿಭಟನೆಗೆ ಮುಂದಾದ ಡಿಎಸ್ಎಸ್ ಕಾರ್ಯಕರ್ತರ ಬಂಧನ - ಕಲಬುರಗಿಯಲ್ಲಿ ಡಿಎಸ್ ಎಸ್ ಕಾರ್ಯಕರ್ತರ ಪ್ರತಿಭಟನೆ
ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಡಿಎಸ್ಎಸ್ ಕಾರ್ಯಕರ್ತರು ಡಿಸಿಎಂ ಗೋವಿಂದ ಕಾರಜೋಳ ಬಳಿ ಬಂದಿದ್ದು, ಮನವಿ ಸ್ವೀಕರಿಸಿಲ್ಲ ಎಂದು ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಕಾರ್ಯಕರ್ತರನ್ನು ಕರೆದೊಯ್ಯುತ್ತಿರುವ ಪೊಲೀಸರು
ಕಾರ್ಯಕರ್ತರನ್ನು ಕರೆದೊಯ್ಯುತ್ತಿರುವ ಪೊಲೀಸರು
ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ಕಾರ್ಯಕರ್ತರು ಮನವಿ ನೀಡಲು ಬಂದ ವೇಳೆ ಡಿಸಿಎಂ ಕಾರಜೋಳ ಅವರು ಮನವಿ ಸ್ವೀಕರಿಸಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ದಶರಥ ಕಲಗುರ್ತಿ ನೇತೃತ್ವದಲ್ಲಿ ಹೊರಾಟಕ್ಕೆ ಮುಂದಾಗಿದ್ರು.
ಈ ವೇಳೆ ಪೊಲೀಸರು ಪ್ರತಿಭಟನಾಕಾರ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಪೊಲೀಸರ ಮಾತಿಗೆ ಮಣಿಯದಿದ್ದಾಗ 12ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.