ಕಲಬುರಗಿಯಲ್ಲಿ ರೌಡಿಗಳ ಪರೇಡ್... ದುಷ್ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಎಸ್ಪಿ ಖಡಕ್ ವಾರ್ನಿಂಗ್ - ಕಲಬುರಗಿ
ನಗರದ ಪೊಲೀಸ್ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸಿದ ಎಸ್ಪಿ ಎನ್ ಶಶಿಕುಮಾರ್ ಅವರು ಕೊಲೆ, ದರೋಡೆ, ಕಳತನ, ಲೈಂಗಿಕ ಕಿರುಕುಳ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು 1000ಕ್ಕೂ ಅಧಿಕ ರೌಡಿಶೀಟರ್ಗಳ ಪರೇಡ್ ನಡೆಸಿದರು.
![ಕಲಬುರಗಿಯಲ್ಲಿ ರೌಡಿಗಳ ಪರೇಡ್... ದುಷ್ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಎಸ್ಪಿ ಖಡಕ್ ವಾರ್ನಿಂಗ್](https://etvbharatimages.akamaized.net/etvbharat/images/768-512-2396277-387-ff52f1dd-65d2-4151-be4a-3d561dcaabd2.jpg)
ರೌಡಿಗಳ ಪರೇಡ್
ಕಲಬುರಗಿ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ್ ಅವರು ನಗರದಲ್ಲಿ ರೌಡಿಗಳ ಪರೇಡ್ ನಡೆಸಿದ್ರು. ನಗರದ ಪೊಲೀಸ್ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸಿದ ಎಸ್ಪಿ ಎನ್ ಶಶಿಕುಮಾರ್ ಅವರು ಕೊಲೆ, ದರೋಡೆ, ಕಳತನ, ಲೈಂಗಿಕ ಕಿರುಕುಳ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು 1000ಕ್ಕೂ ಅಧಿಕ ರೌಡಿಶೀಟರ್ಗಳ ಪರೇಡ್ ನಡೆಸಿದರು.