ಸೇಡಂ: ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಪುರಸಭೆ ಕೊನೆಗೂ ನೀರು ಶುದ್ಧೀಕರಣ ಘಟಕ ಸ್ವಚ್ಛಗೊಳಿಸುವ ಮೂಲಕ ಸೇಡಂ ಜನರಿಗೆ ಶುದ್ಧ ನೀರು ದೊರೆಯುವಂತಾಗಿದೆ.
ಸೇಡಂನಲ್ಲಿ ನೀರು ಶುದ್ಧೀಕರಣ ಘಟಕ ಸ್ವಚ್ಛ ಮಾಡಿದ ಪುರಸಭೆ - sedam kalaburagi latest news
ಹಲವಾರು ವರ್ಷಗಳಿಂದ ಸ್ವಚ್ಛಗೊಳಿಸದೆ ಹಾಗೆಯೇ ಬಿಡಲಾಗಿದ್ದ ನೀರು ಶುದ್ಧೀಕರಣ ಘಟಕದಲ್ಲಿ ಪಾಚಿ ಕಟ್ಟಿಕೊಂಡಿತ್ತು. ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಪುರಸಭೆ ಕೊನೆಗೂ ನೀರು ಶುದ್ಧೀಕರಣ ಘಟಕವನ್ನು ಸ್ವಚ್ಛಗೊಳಿಸಿದೆ.
ಶುದ್ಧೀಕರಣ ಘಟಕ ಶುದ್ಧ ಮಾಡಿದ ಪುರಸಭೆ: ಸೇಡಂ ಜನರಿಗೆ ಸಿಕ್ಕಿತು ಕೊಳಚೆ ನೀರಿನಿಂದ ಮುಕ್ತಿ
ಹಲವಾರು ವರ್ಷಗಳಿಂದ ಸ್ವಚ್ಛಗೊಳಿಸದೆ ಹಾಗೆಯೇ ಬಿಡಲಾಗಿದ್ದ ಶುದ್ಧೀಕರಣ ಘಟಕದಲ್ಲಿ ಪಾಚಿ ಕಟ್ಟಿಕೊಂಡಿತ್ತು. ಪಾಚಿ ತುಂಬಿದ್ದ ನೀರನ್ನೇ ಇಡೀ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿತ್ತು. ಇತ್ತೀಚೆಗೆ ಮುಖಂಡರಾದ ಅನೀಲ ಐನಾಪೂರ ಮತ್ತು ರಾಘವೇಂದ್ರ ಮೆಕ್ಯಾನಿಕ್ ಮತ್ತು ಶೇಖರ ನಾಟೀಕಾರ ಈ ಬಗ್ಗೆ ಅಸಮಾಧಾನ ಹೊರಹಾಕಿ, ಪುರಸಭೆಯ ಗಮನಕ್ಕೆ ತಂದಿದ್ದರು. ಕೂಡಲೇ ಎಚ್ಚೆತ್ತ ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ, 1.50 ಲಕ್ಷ ವೆಚ್ಚ ಮಾಡಿ ನೀರು ಶುದ್ಧೀಕರಣ ಘಟಕವನ್ನು ಶುಚಿಗೊಳಿಸಿದ್ದಾರೆ.