ಕಲಬುರಗಿ:ಜೋಳದ ಕಣಕಿ ಬಣವೆಗೆ ಬೆಂಕಿ ತಗುಲಿದ ಹಿನ್ನೆಲೆ ಬಣವೆ ಸಂಪೂರ್ಣ ಭಸ್ಮವಾದ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.
ಬೆಂಕಿ ತಗುಲಿ 50 ಚೀಲ ಜೋಳದ ಕಣಕಿ ಬೆಂಕಿಗಾಹುತಿ - chittapura
ಲಾಕ್ಡೌನ್ನಿಂದಾಗಿ ಬೆಳೆದಿರುವ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇನ್ನೊಂದೆಡೆ ರೈತ ಬೆಳೆದಿದ್ದ ಜೋಳದ ಕಣಕಿ ಬೆಂಕಿಗಾಹುತಿಯಾಗಿದ್ದು, ರೈತರನ್ನು ಕಂಗಾಲಾಗಿಸಿದೆ.
ಬೆಂಕಿ ತಗುಲಿ 50 ಚೀಲ ಜೋಳದ ಕಣಕಿ ಬೆಂಕಿಗಾಹುತಿ
ಜಲೀಲ್ ಅಹಮ್ಮದ್ ಎಂಬುವರಿಗೆ ಸೇರಿದ 50 ಚೀಲ ಜೋಳದ ಕಣಕಿ ಇರುವ ಬಣವೆಯಲ್ಲಿ ತಡರಾತ್ರಿ ಬೆಂಕಿ ಕಾಣಿಕೊಂಡಿದ್ದು, ಸಂಪೂರ್ಣ ಬಣವೆ ಸುಟ್ಟು ಭಸ್ಮವಾಗಿದೆ. ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ರೈತ ಜಲೀಲ್ ಅಹಮ್ಮದ್ ಆರೋಪಿಸಿದ್ದಾರೆ. ಈ ಕುರಿತು ವಾಡಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.