ಕಲಬುರಗಿ: ಜೇರ್ವಗಿ ಪಟ್ಟಣದ ಪ್ರಸಿದ್ಧ ಮಹಾಲಕ್ಷ್ಮಿ (ಕೋಲ್ಕತಾದೇವಿ) ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮೂಹದಲ್ಲಿ ಅದ್ಧೂರಿಯಾಗಿ ಜರುಗಿತು.
ಅದ್ಧೂರಿಯಾಗಿ ನಡೆಯಿತು ಜೇರ್ವಗಿ ಪಟ್ಟಣದ ಪ್ರಸಿದ್ಧ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ..! - ಇತ್ತೀಚಿನ ಕಲಬುರಗಿ ಸುದ್ದಿ
ಜೇರ್ವಗಿ ಪಟ್ಟಣದ ಪ್ರಸಿದ್ಧ ಮಹಾಲಕ್ಷ್ಮಿ (ಕೋಲ್ಕತಾದೇವಿ) ಜಾತ್ರಾ ಮಹೋತ್ಸವು ಸಹಸ್ರಾರು ಭಕ್ತರ ಸಮೂಹದ ನಡುವೆ ಅದ್ಧೂರಿಯಾಗಿ ಜರುಗಿತು.
ಅದ್ಧೂರಿಯಾಗಿ ನಡೆಯಿತು ಜೇರ್ವಗಿ ಪಟ್ಟಣದ ಪ್ರಸಿದ್ಧ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ !
ಸುಮಾರು ಐದು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಪ್ರತಿದಿನ ವಿಶೇಷ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು. ಜಾತ್ರೆ ಪ್ರಾರಂಭದಲ್ಲಿ ಬಡಿಗೇರ ಮನೆಯಲ್ಲಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ ಬಳಿಕ ಪ್ರತಿದಿನ ದೇವಿಗೆ ವಿಷೇಶ ಪೂಜೆ, ಅಭಿಷೇಕ ನೆರವೇರಿಸಲಾಯಿತು.
ಜಾತ್ರಾ ಮಹೋತ್ಸವ ಅಂಗವಾಗಿ ಇಂದು ದೇವಿಯ ಭವ್ಯ ರಥೋತ್ಸವವು ಸಹಸ್ರಾರು ಭಕ್ತರ ಜಯಘೋಷದ ನಡುವೆ ಸಡಗರದಿಂದ ಜರುಗಿತು. ನೆರೆರಾಜ್ಯ ಮಹಾರಾಷ್ಟ್ರ ಸೇರಿ ವಿವಿಧ ಕಡೆಗಳಿಂದ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದರು.