ಕಲಬುರಗಿ: ನಾವು ಆರೋಗ್ಯವಂತರಾಗಿ ಬಾಳಬೇಕಾದರೆ ನಮ್ಮ ಸುತ್ತಲಿನ ಪರಿಸರವನ್ನು ಚೆನ್ನಾಗಿ ನೋಡಿಕೊಳ್ಳವುದು ಅತ್ಯಂತ ಅವಶ್ಯಕ ಎಂದು ಮಹಾನಗರ ಪಾಲಿಕೆ ಆಯುಕ್ತೆ ಘೌಜಿಯಾ ತರನ್ನುಮ್ ತಿಳಿಸಿದರು.
ನಮ್ಮ ಆರೋಗ್ಯಕ್ಕೆ ಸುತ್ತಮುತ್ತಲಿನ ಪರಿಸರವೂ ಕಾರಣ: ಘೌಜಿಯಾ ತರನ್ನುಮ್ - undefined
ಕಲಬುರಗಿಯ ಮಹಾನಗೆರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಎಲ್ಲರಿಗೂ ಆರೋಗ್ಯವೆಂಬುದು ಮುಖ್ಯ, ಉತ್ತಮ ಆರೋಗ್ಯಕ್ಕೆ ಸುತ್ತಲಿನ ಪರಿಸರವೂ ಮುಖ್ಯವಾಗಿರುತ್ತದೆ ಎಂದು ಪಾಲಿಕೆ ಆಯುಕ್ತೆ ಹೇಳಿದರು
ಪಾಲಿಕೆ ವತಿಯಿಂದ ನಗರದ ಎಸ್ ಎಮ್ ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಿದ್ದ ಕಸ ಸಂಗ್ರಹಣೆ, ಮಳೆ ನೀರು ಕೊಯ್ಲು ಪದ್ದತಿ ಮತ್ತು ಪ್ಲಾಸ್ಟಿಕ್ ಮುಕ್ತ ಕಲಬುರಗಿ ಅರಿವು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಚ್ಛತೆಯು ಪೌರಕಾರ್ಮಿಕರ ಮನೆಯಿಂದ ಆರಂಭವಾಗಬೇಕು. ಪೌರ ಕಾರ್ಮಿಕರು ತಮಗೆ ನಿಯೋಜಿಸಲಾದ ವಾರ್ಡಗಳಿಗೆ ಹೋಗಿ ಪ್ರತಿನಿತ್ಯ ಹಸಿ ಮತ್ತು ಒಣ ಕಸಗಳ ವಿಂಗಡಣೆ ಮತ್ತು ಕಸ ವಿಲೇವಾರಿ ಬಗ್ಗೆ ಜನರಲ್ಲಿ ತಿಳಿಹೇಳಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಪರಿಸರ ತಜ್ಞ ಡಾ.ಶಂಕ್ರಪ್ಪ ಹತ್ತಿ, ಪಾಲಿಕೆ ಆರೋಗ್ಯಧಿಕಾರಿ ವಿನೋದಕುಮಾರ್ ಹೂಸಳ್ಳಿ ಸೇರಿದಂತೆ ಇನ್ನಿತರರು ಹಾಜರಿದ್ದರು.