ಕಲಬುರಗಿ: ಮೂರು ವರ್ಷ ಪ್ರೀತಿಸಿ ಇನ್ನೇನು ಹಸೆಮಣೆ ಏರಬೇಕೆಂದಿದ್ದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ, ಚಿಂಚೋಳಿ ತಾಲೂಕಿನ ಸೂರುನಾಯಕ ತಾಂಡದಲ್ಲಿ ನಡೆದಿದೆ.
ಮೂರು ವರ್ಷದ ಪ್ರೀತಿ ಆತ್ಮಹತ್ಯೆಯಲ್ಲಿ ಅಂತ್ಯ: ಕಲಬುರಗಿಯಲ್ಲಿ ಪ್ರಿಯಕರ ನಾಪತ್ತೆ - ಯುವತಿ ಆತ್ಮಹತ್ಯೆಗೆ ಶರಣು
ಕಾವೇರಿ ಹಾಗೂ ಮಾನಸಿಂಗ್ ರಾಠೋಡ ಇಬ್ಬರು ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸಿದ್ದರು. ಇಬ್ಬರೂ ಮನೆಯಲ್ಲಿ ಹಿರಿಯರನ್ನು ಒಪ್ಪಿಸಿ ಮದುವೆಯಾಗಲು ಮುಂದಾಗಿದ್ದರು. ಈ ನಡುವೆ ಏನಾಯ್ತೋ ಗೊತ್ತಿಲ್ಲ, ಯುವತಿ ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ.

ಕಾವೇರಿ ಪವಾರ ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಕಾವೇರಿ ಹಾಗೂ ಸಲಗರ ಕಾಲೋನಿ ತಾಂಡಾದ ಮಾನಸಿಂಗ್ ರಾಠೋಡ ಇಬ್ಬರು ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸಿದ್ದರು. ಎರಡು ವರ್ಷಗಳಿಂದ ಹೊರದೇಶ ಸೌದಿ ಅರೇಬಿಯಾದಲ್ಲಿ ವಾಸವಾಗಿದ್ದ ಮಾನಸಿಂಗ್, ಇಬ್ಬರ ಮನೆಯಲ್ಲಿ ಹಿರಿಯರನ್ನು ಒಪ್ಪಿಸಿ ಮದುವೆ ಮಾಡಿಕೊಳ್ಳಲೆಂದು 20 ದಿನಗಳ ಹಿಂದಷ್ಟೆ ತಾಂಡಾಕ್ಕೆ ಮರಳಿದ್ದ.
ಈ ನಡುವೆ ಯುವತಿ ಹಾಗೂ ಯುವಕನ ನಡುವೆ ಏನಾಯ್ತೋ ಗೊತ್ತಿಲ್ಲ. ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಯುವತಿಯ ಸಾವಿನ ಬಳಿಕ ಮಾನಸಿಂಗ್ ನಾಪತ್ತೆಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಚಿಂಚೋಳಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆ ನಂತರವಷ್ಟೇ ನಿಗೂಢವಾಗಿರುವ ಪ್ರಕರಣದ ಹಿನ್ನೆಲೆ ತಿಳಿದುಬರಬೇಕಿದೆ.