ಕಲಬುರಗಿ: ಪಾದಚಾರಿಗೆ ಬೈಕ್ನಲ್ಲಿ ಅಪಘಾತ ಎಸಗಿ ಆತನ ಸಾವಿಗೆ ಕಾರಣನಾಗಿದ್ದ ವ್ಯಕ್ತಿಗೆ ಚಿಂಚೋಳಿ ಜೆಎಮ್ಎಫ್ಸಿ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ. 2016ರಲ್ಲಿ ನಡೆದಿದ್ದ ಪ್ರರಕಣದಲ್ಲಿ ನ್ಯಾಯಾಲಯ ಇಂದು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಚಂದ್ರಶೇಖರಯ್ಯ ಮಠಪತಿ ಎಂಬುವರೇ ಶಿಕ್ಷೆಗೆ ಗುರಿಯಾದ ಬೈಕ್ ಸವಾರನಾಗಿದ್ದಾರೆ. ರಸ್ತೆಯಲ್ಲಿ ತೆರಳುತ್ತಿದ್ದ ಖತ್ತಲಪ್ಪ ಎಂಬುವರಿಗೆ ಹಿಂಬದಿಯಿಂದ ಡಿಕ್ಕಿ ಬೈಕ್ ಗುದ್ದಿಸಿದ್ದರಿಂದ ಈ ಅಪಘಾತದಲ್ಲಿ ಗಾಯಗೊಂಡಿದ್ದ ಖತ್ತಲಪ್ಪ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
ಈ ಸಂಬಂಧ ಸುಲೆಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪ್ರಕರಣ ಕೈಗೆತ್ತಿಕೊಂಡ ಚಿಂಚೋಳಿ ಜೆಎಂಎಫ್ಸಿ ನ್ಯಾಯಾಧೀಶರಾದ ಪ್ರೇಮಕುಮಾರ್ ವಾದ-ವಿವಾದ ಆಲಿಸಿದ ಬಳಿಕ ಆರೋಪಿ ಚಂದ್ರಶೇಖರಯ್ಯ ಮಠಪತಿಗೆ ಐಪಿಸಿ ಸೆಕ್ಷನ್ 279ರ ಅಡಿ 1 ಸಾವಿರ ರೂಪಾಯಿ ದಂಡ, ತಪ್ಪಿದಲ್ಲಿ 1 ತಿಂಗಳು ಸಾದಾ ಜೈಲುಶಿಕ್ಷೆ, ಐಪಿಸಿ ಸೆಕ್ಷನ್ 304(ಎ)ರ ಅಡಿಯಲ್ಲಿ 6 ತಿಂಗಳು ಸಾದಾ ಕಾರಾಗೃಹ ವಾಸ, 1 ಸಾವಿರ ರೂ. ದಂಡ, ಎಂಪಿ ಕಾಯ್ದೆ 187ರ ಅಪರಾಧಕ್ಕೆ 500 ರೂ. ದಂಡ, ತಪ್ಪಿದ್ದಲ್ಲಿ 15 ದಿನ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ: ಚೀನಾ ಪ್ರಜೆ ಅರೆಸ್ಟ್