ಕರ್ನಾಟಕ

karnataka

ETV Bharat / state

ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ ನಾಥೂರಾಮ್ ಗೋಡ್ಸೆ; ಓವೈಸಿ

ಗೋಡ್ಸೆ ದೇಶವನ್ನು ಹಿಂದೂ ರಾಷ್ಟ್ರವಾಗಿಸುವ ಹುನ್ನಾರ ಹೊಂದಿದ್ದ. ಆತನ ಉದ್ದೇಶವನ್ನು ಈಡೇರಿಸಲು ಗೋಡ್ಸೆ ಸಂತತಿ ಹೊರಟಿದೆ. ರಾಮನ ಹೆಸರಲ್ಲಿ ಸಮಾಜದಲ್ಲಿ ದ್ವೇಷ ಬಿತ್ತಲಾಗ್ತಿದೆ. ಹಿಂದೂ-ಮುಸ್ಲಿಂ ನಡುವೆ ಭಿನ್ನಾಭಿಪ್ರಾಯ ಹುಟ್ಟು ಹಾಕಲಾಗ್ತಿದೆ ಎಂದು ಎಐಎಂಐಎಂ ಸಂಸ್ಥಾಪಕ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.

AIMIM founder Asaduddin Owaisi
ಎಐಎಂಐಎಂ ಸಂಸ್ಥಾಪಕ ಅಸಾದುದ್ದೀನ್ ಓವೈಸಿ

By

Published : Jan 31, 2021, 12:20 PM IST

ಕಲಬುರಗಿ: ಈ ದೇಶವನ್ನು ಗೋಡ್ಸೆ ದಾರಿಯಲ್ಲಿ ಕೊಂಡೊಯ್ಯಲಾಗುತ್ತಿದೆ ಎಂದು ಎಐಎಂಐಎಂ ಸಂಸ್ಥಾಪಕ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.

ಎಐಎಂಐಎಂ ಸಂಸ್ಥಾಪಕ ಅಸಾದುದ್ದೀನ್ ಓವೈಸಿ

ಕಲಬುರಗಿಯ ಮೊಘಲ್ ಗಾರ್ಡನ್​​ನಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಓವೈಸಿ, ಗೋಡ್ಸೆ ದೇಶವನ್ನು ಹಿಂದೂ ರಾಷ್ಟ್ರವಾಗಿಸುವ ಹುನ್ನಾರ ಹೊಂದಿದ್ದ. ಆತನ ಉದ್ದೇಶವನ್ನು ಈಡೇರಿಸಲು ಗೋಡ್ಸೆ ಸಂತತಿ ಹೊರಟಿದೆ. ರಾಮನ ಹೆಸರಲ್ಲಿ ಸಮಾಜದಲ್ಲಿ ದ್ವೇಷ ಬಿತ್ತಲಾಗುತ್ತಿದೆ. ಹಿಂದೂ-ಮುಸ್ಲಿಂ ಸಮುದಾಯದ ನಡುವೆ ಭಿನ್ನಾಭಿಪ್ರಾಯ ಹುಟ್ಟು ಹಾಕಲಾಗ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ದೇಶವನ್ನು ಉಳಿಸಬೇಕಾದರೆ ಗೋಡ್ಸೆ ಅವರನ್ನು ತಿರಸ್ಕರಿಸುವ ಜನರಿಂದ ಮಾತ್ರ ಸಾಧ್ಯ. ಪ್ರಧಾನಿ ಮೋದಿ ಅವರು ಒಂದು ಕಡೆ ಗಾಂಧೀಜಿ ಅವರನ್ನು ಆರಾಧಿಸುತ್ತಾರೆ. ಮತ್ತೊಂದು ಕಡೆ ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನೂ ಆರಾಧಿಸ್ತಾರೆ. ಈ ರೀತಿಯ ದ್ವಂದ್ವ ಸರಿಯಲ್ಲ ಎಂದರು.

ಓದಿ:ಲವ್​ ಜಿಹಾದ್​​ ಕಾನೂನು ಜಾರಿ ಸಂವಿಧಾನದ ಅಪಹಾಸ್ಯ : ಓವೈಸಿ

ಗೋಡ್ಸೆ ಗಾಂಧೀಜಿ ಹತ್ಯೆ ಮಾಡುವುದರ ಹಿಂದೆ ಸಾವರ್ಕರ್ ಕೈವಾಡವಿದೆ:
ಸ್ವಾತಂತ್ರ್ಯೋತ್ತರ ಭಾರತದ ಮೊದಲ ಉಗ್ರಗಾಮಿ ನಾಥೂರಾಮ್ ಗೋಡ್ಸೆ. ಗಾಂಧೀಜಿಯವರ ಹತ್ಯೆಯ ಹಿಂದೆ ಸಾವರ್ಕರ್ ಇದ್ದರು. ಅಂದಿನ ಕಾಂಗ್ರೆಸ್ ಸರ್ಕಾರ ಸರಿಯಾಗಿ ತನಿಖೆ ಮಾಡಿದ್ದರೆ ಸಂಘ ಪರಿವಾರದ ಮುಖಂಡರೆಲ್ಲರೂ ಜೈಲಿನಲ್ಲಿರುತ್ತಿದ್ದರು ಎಂದು ಕಾಂಗ್ರೆಸ್ ಮತ್ತು ಸಂಘ ಪರಿವಾರದ ವಿರುದ್ಧ ಓವೈಸಿ ವಾಗ್ದಾಳಿ ನಡೆಸಿದರು.

ABOUT THE AUTHOR

...view details