ಕರ್ನಾಟಕ

karnataka

ಸದ್ಯದಲ್ಲೇ ಕಲಬುರಗಿಯಲ್ಲಿ ಕೊರೊನಾ ಪತ್ತೆ ಹಚ್ಚುವ ಲ್ಯಾಬ್ ಆರಂಭ: ಸಂಸದ ಉಮೇಶ್ ಜಾಧವ್

By

Published : Mar 17, 2020, 12:58 AM IST

Updated : Mar 17, 2020, 9:39 AM IST

ಕೊರೊನಾ‌ ಸೋಂಕು ಸೋಂಕು ಪತ್ತೆ ಹಚ್ಚುವ ಲ್ಯಾಬೊರೇಟರಿ ಕಲಬುರಗಿಯಲ್ಲಿ ಮಾರ್ಚ್ 18 ರಿಂದ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

MP Umesh Jadhav
ಸಂಸದ ಉಮೇಶ ಜಾಧವ್

ಕಲಬುರಗಿ: ಮಾರ್ಚ್ 18 ರಿಂದ ಕೊರೊನಾ ಸೋಂಕು ಪತ್ತೆ ಹಚ್ಚುವ ಲ್ಯಾಬೊರೇಟರಿ ಕಲಬುರಗಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಸಂಸದ ಉಮೇಶ ಜಾಧವ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ತಮ್ಮ ಟ್ವಿಟರ್​ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಂಸದರು, ಕೊರೊನಾ ವೈರಸ್ ರಿಸರ್ಚ್‌ & ಡೈಯಗ್ನೋಸ್ಟಿಕ್​ ಲ್ಯಾಬ್ ಮಾರ್ಚ್ 18 ರಿಂದ ಕಾರ್ಯಾರಂಭ ಮಾಡಲಿದೆ. ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಈಗಾಗಲೇ ಮನವಿ ಮಾಡಿದ್ದು, ಶೀಘ್ರವೇ ಪರೀಕ್ಷಾ ಉಪಕರಣಗಳು ಜಿಲ್ಲೆಗೆ ತಲುಪಲಿವೆ ಎಂದು ಬರೆದುಕೊಂಡಿದ್ದಾರೆ.

ಸದ್ಯ ಕೊರೊನಾ ವೈರಸ್ ಶಂಕಿತರ ಕಫ, ಗಂಟಲು ದ್ರವ ಟೆಸ್ಟ್​ಗೆ ಬೆಂಗಳೂರಿಗೆ ಕಳುಹಿಸುತ್ತಿರುವ ಹಿನ್ನೆಲೆಯಲ್ಲಿ ವರದಿ ಸೇರುವುದು ವಿಳಂಬವಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿಯೇ ಪ್ರಯೋಗಾಲಯ ಪ್ರಾರಂಭಿಸುವಂತೆ ಒತ್ತಾಯ ಕೇಳಿ ಬಂದಿತ್ತು. ಲ್ಯಾಬ್​ ಪ್ರಾರಂಭಗೊಳ್ಳುವುದರಿಂದ ಕೊರೊನಾ ಸೊಂಕು ಖಚಿತ ಪಡಿಸಿಕೊಳ್ಳುವುದು ಸುಲಭ ಹಾಗೂ ಶೀಘ್ರ ಆಗಲಿದೆ ಎಂದು ತಿಳಿಸಿದ್ದಾರೆ.

Last Updated : Mar 17, 2020, 9:39 AM IST

ABOUT THE AUTHOR

...view details