ಕಲಬುರಗಿ: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದು ತಪ್ಪಿಸಲು ಹೋಗಿ ಸಾರಿಗೆ ಬಸ್ ಪಲ್ಟಿಯಾಗಿದ್ದು, 32 ಜನರು ಕೂದಲೆಳೆಯಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರದ ನಾಗನಳ್ಳಿ ರಿಂಗ್ ರಸ್ತೆಯ ದತ್ತಾತ್ರೇಯ ಕಾಲೋನಿ ಬಳಿ ನಡೆದಿದೆ.
ಕಲಬುರಗಿಯಿಂದ ಚಿತ್ತಾಪುರಕ್ಕೆ ರಿಂಗ್ ರಸ್ತೆ ಮೂಲಕ ತೆರಳುತಿದ್ದ ಸಾರಿಗೆ ಬಸ್‌ಗೆ ಅಡ್ಡಲಾಗಿ ದ್ವಿಚಕ್ರ ವಾಹನ ಬಂದಿದೆ. ಈ ವೇಳೆ ಬೈಕ್ ಡಿಕ್ಕಿ ತಪ್ಪಿಸಲು ಹೋಗಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಎದುರು ಯಾವುದಾದರೂ ವಾಹನ ಬರಬಹುದು ಎಂದು ನಿಯಂತ್ರಣಕ್ಕೆ ತೆಗೆದುಕೊಳ್ಳುವಷ್ಟರಲ್ಲಿ ಡಿವೈಡರ್ ಮೇಲೆ ಹತ್ತಿ ರಸ್ತೆ ಬದಿಯ ಆಳಕ್ಕೆ ಉರುಳಿದೆ.