ಕಲಬುರಗಿ:ಲಂಚದ ಹಣ ಪಡೆಯುವಾಗ ಜೇವರ್ಗಿ ಕೃಷಿ ಸಹಾಯಕ ನಿರ್ದೇಶಕ ಸುನೀಲ್ ಕುಮಾರ ಯರಗೋಳ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಕಲಬುರಗಿ: ಲಂಚದ ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಕೃಷಿ ಸಹಾಯಕ ನಿರ್ದೇಶಕ..!! - Sunil, Assistant Director of Javergi Agriculture
ಜೇವರ್ಗಿಯ ಶ್ರೀಶೈಲ್ ಮಲ್ಲಿಕಾರ್ಜುನ ಕೃಷಿ ಸಂಸ್ಥೆಯಿಂದ ರೈತರಿಗೆ ನೀಡಿದ ಕೃಷಿ ಸಲಕರಣೆಗಳ ಬಿಲ್ ಪಾಸ್ ಮಾಡಲು ಶಂಕರಗೌಡ ಎಂಬುವರಿಗೆ ಸುನೀಲ್ ಕುಮಾರ್ ಒಂದುವರೆ ಲಕ್ಷ ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಜೇವರ್ಗಿಯ ಶ್ರೀಶೈಲ್ ಮಲ್ಲಿಕಾರ್ಜುನ ಕೃಷಿ ಸಂಸ್ಥೆಯಿಂದ ರೈತರಿಗೆ ನೀಡಿದ ಕೃಷಿ ಸಲಕರಣೆಗಳ ಬಿಲ್ ಪಾಸ್ ಮಾಡಲು ಶಂಕರಗೌಡ ಎಂಬುವರಿಗೆ ಸುನೀಲ್ ಕುಮಾರ್ ಒಂದುವರೆ ಲಕ್ಷ ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಮೊದಲ ಕಂತಾಗಿ 50 ಸಾವಿರ ರೂಪಾಯಿಗಳನ್ನು ಕಲಬುರಗಿ ನಗರದ ಕನ್ನಡ ಭವನದ ಮುಂದೆ ಹಣ ಪಡೆಯುವಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ಕೈಗೆ ಸುನೀಲಕುಮಾರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಎಸಿಬಿ, ಎಸ್ಪಿ ಮಹೇಶ್ ಮೇಗನ್ನವರ್, ಡಿಎಸ್ಪಿ ಬಶೀರುದ್ದೀನ್ ಪಟೇಲ್ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಇನ್ಸ್ಪೆಕ್ಟರ್ ರಾಘವೇಂದ್ರ ಬಜಂತ್ರಿ, ಶರಣು ಕೊಡ್ಲಾ, ಇಸ್ಮಾಯಿಲ್ ಶರಿಫ್ ಮತ್ತು ಸಿಬ್ಬಂದಿ ಮಾರೆಪ್ಪ, ಫಾಹಿಮ್, ಶರಣು ಪಾಲ್ಗೊಂಡಿದ್ದರು.