ಕರ್ನಾಟಕ

karnataka

ETV Bharat / state

ಕಲಬುರಗಿ: ಮೂವರು ಖತರ್ನಾಕ್ ಬೈಕ್ ಕಳ್ಳರ ಬಂಧನ - arrest of three bike thieves at Kalburgi

ಕಲಬುರಗಿ ಜಿಲ್ಲೆಯ ಹಲವೆಡೆ ಬೈಕ್ ಕದ್ದು ಪರಾರಿಯಾಗಿದ್ದ ಮೂವರು ಕಳ್ಳರನ್ನು ಆಳಂದ ತಾಲೂಕಿನ ನಿಂಬರ್ಗಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

Arrest
Arrest

By

Published : Oct 10, 2020, 2:46 PM IST

ಕಲಬುರಗಿ: ಮೂವರು ಖತರ್ನಾಕ್ ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಆಳಂದ ತಾಲೂಕಿನ ನಿಂಬರ್ಗಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೋಮಲಿಂಗ ಕೊಂಬಿನ್, ಶಿವಾನಂದ ಪೆಡಗಾ, ದಿಲೀಪ್ ದೊಡ್ಮನಿ ಬಂಧಿತ ಆರೋಪಿಗಳು. ಬಂಧಿತರಿಂದ 11 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಜಿಲ್ಲೆಯ ಹಲವೆಡೆ ಬೈಕ್ ಕದ್ದು ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಾದ ಹಿನ್ನೆಲೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಿಂಬರ್ಗಾ ಠಾಣೆಯ ಪಿಎಸ್ಐ ಸುರೇಶ್ ಕುಮಾರ್ ಚವ್ಹಾಣ್​, ಶಂಕರ, ಸಿದ್ದಾರಾಮ, ಇಮಾಮ್, ಭೀಮಾಶಂಕರ, ರಮೇಶ್, ಮಲ್ಲಿನಾಥ, ಭಿಮಾಶಂಕರ ಉಡಗಿ, ರಮೇಶ್, ಲಕ್ಮಿಪುತ್ರ, ಸಿದ್ದಣ್ಣ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸಿದೆ.‌

ಈ ಕುರಿತು ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details