ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ 140ಕ್ಕೂ ಅಧಿಕ ದೇವಸ್ಥಾನಗಳ ತೆರವಿಗೆ ಸಿದ್ಧತೆ: ಸ್ಥಳೀಯರ ಆಕ್ರೋಶ - Temple demolish in Kalaburgi news

ಮೊದಲ ಹಂತವಾಗಿ 30 ದೇವಸ್ಥಾನಗಳನ್ನು ತೆರವು ಮಾಡೋದಕ್ಕೆ ಕಲಬುರಗಿ ಪಾಲಿಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಹಿಂದೆ ಆಗಸ್ಟ್ 18 ರಂದು ಕಲಬುರಗಿಯ ಯಮುನಾ ನಗರದಲ್ಲಿರುವ ಹಾದಿ ಬಸವಣ್ಣ ದೇವಸ್ಥಾನ ತೆರವಿಗೆ ಮುಂದಾಗಿದ್ದ ಪಾಲಿಕೆ ಅಧಿಕಾರಿಗಳಿಗೆ ಸಾರ್ವಜನಿಕರು ಚಳಿ ಬಿಡಿಸಿದ್ದರು. ಪ್ರತಿಭಟನೆ ಮಾಡಿ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದರು. ಇದೀಗ ಮತ್ತೊಮ್ಮೆ ದೇವಾಲಯಗಳನ್ನು ತೆರವು ಮಾಡೋದಕ್ಕೆ ಸಿದ್ಧವಾಗುತ್ತಿದೆ.

Temple demolish in Kalaburgi
ಕಲಬುರಗಿಯಲ್ಲಿ ದೇವಸ್ಥಾನಗಳ ತೆರವಿಗೆ ಸಿದ್ಧತೆ

By

Published : Sep 14, 2021, 7:44 PM IST

ಕಲಬುರಗಿ:ಅನಧಿಕೃತ ದೇವಸ್ಥಾನಗಳ ತೆರವಿಗೆ ಸುಪ್ರಿಂಕೋರ್ಟ್ ಆದೇಶ ಹಿ‌ನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಕಲಬುರಗಿಯಲ್ಲಿ 140ಕ್ಕೂ ಅಧಿಕ ದೇವಸ್ಥಾನಗಳ ಪಟ್ಟಿ ಮಾಡಿದೆ.

ಮೊದಲ ಹಂತವಾಗಿ 30 ದೇವಸ್ಥಾನಗಳನ್ನು ತೆರವು ಮಾಡೋದಕ್ಕೆ ಪಾಲಿಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದ್ರೆ ದೇವಸ್ಥಾನ ತೆರವು ಮಾಡೋದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗುವ ಕಾರಣಕ್ಕೆ‌ ಸ್ಥಳೀಯ ಮುಖಂಡರ ಜೊತೆ ಚರ್ಚಿಸಿ ತೆರವು ಕಾರ್ಯಚರಣೆಗೆ ಮುಂದಾಗೋಕೆ ಪಾಲಿಕೆ ಸಿದ್ಧವಾಗುತ್ತಿದೆ.

ಈ ಹಿಂದೆ ಆಗಸ್ಟ್ 18 ರಂದು ಕಲಬುರಗಿಯ ಯಮುನಾ ನಗರದಲ್ಲಿರುವ ಹಾದಿ ಬಸವಣ್ಣ ದೇವಸ್ಥಾನ ತೆರವಿಗೆ ಮುಂದಾಗಿದ್ದ ಪಾಲಿಕೆ ಅಧಿಕಾರಿಗಳಿಗೆ ಸಾರ್ವಜನಿಕರು ಚಳಿ ಬಿಡಿಸಿದ್ದರು. ಪ್ರತಿಭಟನೆ ಮಾಡಿ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದರು. ಇದೀಗ ಮತ್ತೊಮ್ಮೆ ದೇವಾಲಯಗಳನ್ನು ತೆರವು ಮಾಡೋದಕ್ಕೆ ಸಿದ್ಧವಾಗುತ್ತಿದೆ.

ದೇವಸ್ಥಾನಗಳ ತೆರವಿಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಪಾಲಿಕೆ ಅಧಿಕಾರಿಗಳು ದೇವಸ್ಥಾನದ ತಂಟೆಗೆ ಬಂದ್ರೆ ಸುಮ್ಮನೆ ಬಿಡುವುದಿಲ್ಲ. ಹಿಂದೂ ವಿರೋಧ ಚಟುವಟಿಕೆ ಮಾಡಿದ್ರೆ ನಮ್ಮ ಜೀವ ಹೋದರೂ ತೆರವು ಮಾಡೋದಕ್ಕೆ ಬಿಡೋದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ:ವಕ್ಫ್ ಮಂಡಳಿ ರೀತಿ ದೇವಸ್ಥಾನದ ರಕ್ಷಣೆಗೂ ವ್ಯವಸ್ಥೆ ಮಾಡಿ: ಸಂಸದ ಪ್ರತಾಪ್ ಸಿಂಹ

ABOUT THE AUTHOR

...view details