ಕರ್ನಾಟಕ

karnataka

ETV Bharat / state

ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್ ಸೇವೆಗೆ ಮುಂದಾದ ತೇಲ್ಕೂರ ಫೌಂಡೇಷನ್ - Klaburgi latest News

ಕೋವಿಡ್ ಕಷ್ಟಕಾಲದಲ್ಲಿ ಸರಿಯಾದ ವಾಹನ ಸೌಲಭ್ಯ ಮತ್ತು ಸರ್ಕಾರದ ಆ್ಯಂಬುಲೆನ್ಸ್ ಸೇವೆ ಪಡೆಯಲು ಸಮಸ್ಯೆ ಎದುರಾದವರಿಗೆ ತೇಲ್ಕೂರ ಪಾಟೀಲ ಫೌಂಡೇಷನ್ ನೆರವಾಗಲಿದೆ..

ambulance
ತೆಲ್ಕೂರ ಫೌಂಡೇಷನ್

By

Published : May 3, 2021, 12:03 PM IST

ಸೇಡಂ(ಕಲಬುರಗಿ): ಇಲ್ಲಿನ ತೇಲ್ಕೂರ ಪಾಟೀಲ ಫೌಂಡೇಷನ್ ಮತ್ತು ಹೆರಿಟೇಜ್ ಪಬ್ಲಿಕ್ ಸ್ಕೂಲ್ ವತಿಯಿಂದ ಉಚಿತ ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ.

ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರ ಸಹೋದರ ಅನಿಲ್​ ಕುಮಾರ್ ಪಾಟೀಲ ತೇಲ್ಕೂರ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ಫೌಂಡೇಷನ್ ವತಿಯಿಂದ ಉಚಿತ ಆ್ಯಂಬುಲೆನ್ಸ್ ಸೇವೆ ಆರಂಭಿಸಿದ್ದಾರೆ.

ಕೋವಿಡ್ ಕಷ್ಟಕಾಲದಲ್ಲಿ ಸರಿಯಾದ ವಾಹನ ಸೌಲಭ್ಯ ಮತ್ತು ಸರ್ಕಾರದ ಆ್ಯಂಬುಲೆನ್ಸ್ ಸೇವೆ ಪಡೆಯಲು ಸಮಸ್ಯೆ ಎದುರಾದವರಿಗೆ ತೇಲ್ಕೂರ ಪಾಟೀಲ ಫೌಂಡೇಷನ್ ನೆರವಾಗಲಿದೆ.

ಈ ಆ್ಯಂಬುಲೆನ್ಸ್​ನಲ್ಲಿ ಆಕ್ಸಿಜನ್ ಸೌಲಭ್ಯವೂ ಇದೆ. ಇದರಿಂದ ಆಪತ್ಕಾಲದಲ್ಲಿ ಆಕ್ಸಿಜನ್ ದೊರೆಯಲಿದೆ. ಆ್ಯಂಬುಲೆನ್ಸ್ ಅವಶ್ಯಕತೆ ಇರುವವರು ಮೊಬೈಲ್ ಸಂಖ್ಯೆ 8565822666 ಅಥವಾ 8565922666 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ABOUT THE AUTHOR

...view details