ಕರ್ನಾಟಕ

karnataka

ETV Bharat / state

ಕಾಗಿಣಾ ನದಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ತೆಲಂಗಾಣದ ದಂಪತಿ ಮೃತದೇಹ ಪತ್ತೆ - Telangana couple dies in Kagina river in Kalaburagi

ಕಾಗಿಣಾ ನದಿ ಪ್ರವಾಹಕ್ಕೆ ಸಿಲುಕಿ ತೆಲಂಗಾಣದ ದಂಪತಿ ಸಾವು- ಕಲಬುರಗಿ ಜಿಲ್ಲೆಯಲ್ಲಿ ಹರಿಯುವ ಕಾಗಿಣಾ ನದಿ- ಚಿಂಚೋಳಿ ತಾಲೂಕಿನ ಜಟ್ಟೂರ್​ ಬಳಿ ಮೃತದೇಹ ಪತ್ತೆ

telangana-couple-dies-in-kagina-river-in-kalaburagi
ಕಾಗಿಣಾ ನದಿ ಪ್ರವಾಹಕ್ಕೆ ಸಿಲುಕಿ ತೆಲಂಗಾಣದ ದಂಪತಿ ಸಾವು

By

Published : Jul 27, 2022, 3:50 PM IST

ಕಲಬುರಗಿ : ಕಾಗಿಣಾ ನದಿ ಪ್ರವಾಹಕ್ಕೆ ಸಿಲುಕಿ ನೆರೆಯ ತೆಲಂಗಾಣ ರಾಜ್ಯದ ದಂಪತಿ ಸಾವನ್ನಪ್ಪಿರುವ ಘಟನೆ‌ ಚಿಂಚೋಳಿ ತಾಲೂಕಿನ ಜಟ್ಟೂರ್ ಬಳಿ ನಡೆದಿದೆ. ತೆಲಂಗಾಣದ ಮಂತಟ್ಟಿ ಗ್ರಾಮದ ನಿವಾಸಿಗಳಾದ ಬುಗ್ಗಪ್ಪ (60) ಹಾಗೂ ಇವರ ಪತ್ನಿ ಯಾದಮ್ಮ‌ (55) ಮೃತ ದಂಪತಿ ಎಂದು ಗುರುತಿಸಲಾಗಿದೆ.

ಕರ್ನಾಟಕ ಗಡಿಭಾಗದಲ್ಲಿರುವ ತೆಲಂಗಾಣದ ಬಸಿರಾಬಾದ್ ನಲ್ಲಿ ತರಕಾರಿ ವ್ಯಾಪಾರ ಮುಗಿಸಿಕೊಂಡು ಮರಳಿ ತಮ್ಮೂರು ಮಂತಟ್ಟಿ ಗ್ರಾಮದ ಮನೆಗೆ ಹೋಗುವಾಗ ಕಾಗಿಣಾ ನದಿ ಪ್ರವಾಹದಲ್ಲಿ ಸಿಲುಕಿ ಇತ್ತೀಚೆಗೆ ಕೊಚ್ಚಿಕೊಂಡು ಹೋಗಿದ್ದರು. ಚಿಂಚೋಳಿ ತಾಲೂಕಿನ ಜಟ್ಟೂರ್ ಗ್ರಾಮದ ಬಳಿ ನಿನ್ನೆ ತಡರಾತ್ರಿ ಪತ್ನಿ ಯಾದಮ್ಮಳ ಶವ ಪತ್ತೆಯಾಗಿದ್ದು, ಇಂದು ಪತಿ ಬುಗ್ಗಪ್ಪನ ಶವ ಪತ್ತೆಯಾಗಿದೆ.

ಈ ಸಂಬಂಧ ಸುಲೆಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ :ಮಾಜಿ ಶಾಸಕ ವೈ.ಸಂಪಂಗಿಗೆ ಕೊಲೆ ಬೆದರಿಕೆ: ಎಸ್​ಪಿಗೆ ದೂರು

For All Latest Updates

TAGGED:

ABOUT THE AUTHOR

...view details