ಕಲಬುರಗಿ: ನೆರೆ ಪೀಡಿತ ಜನರಿಗೆ ಕಲಬುರಗಿಯ ದಾಲ್ ಮಿಲ್ ಅಸೋಸಿಯೇಷನ್ ವತಿಯಿಂದ 103 ಕ್ವಿಂಟಲ್ ತೊಗರಿ ಬೇಳೆಯನ್ನು ನೆರೆಪೀಡಿತ ಪ್ರದೇಶಗಳಿಗೆ ರವಾನಿಸಲಾಗಿದೆ.
ರಾಜ್ಯದಲ್ಲಿ ಉಂಟಾದ ನೆರೆ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ. ಇಂತಹ ಪರಿಸ್ಥಿತಿಯಲ್ಲಿ ಕಲಬುರಗಿಯ ಬೇಳೆ ಕಾಳು ಉತ್ಪಾದಕರ ಸಂಘ ಪ್ರವಾಹ ಪೀಡಿತರ ನೋವಿಗೆ ಸ್ಪಂದಿಸಿದೆ. ಸದ್ಯದ ಮಟ್ಟಿಗೆ ದುಬಾರಿ ವಸ್ತುಗಳಲ್ಲಿ ತೊಗರಿ ಬೇಳೆಯೂ ಒಂದು ಎಂಬಂತಾಗಿದೆ. ಇಂತಹ ಸಂದರ್ಭದಲ್ಲಿಯೂ ಸಹ ದಾಲ್ ಮಿಲ್ ಮಾಲೀಕರಿಂದ ತೊಗರಿ ಬೇಳೆ ಸಂಗ್ರಹಿಸಿ ದೇಣಿಗೆಯಾಗಿ ನೀಡಲಾಗುತ್ತಿದೆ. 7.50 ಲಕ್ಷ ರೂಪಾಯಿ ಮೌಲ್ಯದ 103 ಕ್ವಿಂಟಲ್ 25 ಕೆ.ಜೆ. ತೊಗರಿ ಬೇಳೆಯನ್ನು ನೆರೆಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಡಲಾಯಿತು.