ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಸ್ವಂತ ಹಣದಲ್ಲಿ ಕೂಲಿ ಕಾರ್ಮಿಕರಿಗೆ ಅಗತ್ಯ ಸಾಮಗ್ರಿ ವಿತರಿಸಿದ ಗೆಳೆಯರು

ವಾಡಿ ಪಟ್ಟಣದಲ್ಲಿ ನಾಲ್ಕು ಜನ ಗೆಳೆಯರು ತಮ್ಮ ಸ್ವಂತ ದುಡ್ಡಿನಲ್ಲಿ ಬಡ ಹಾಗೂ ಕೂಲಿ ಕಾರ್ಮಿಕ ಕುಟುಂಬಗಳಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆ ಸೇರಿದಂತೆ ಆಹಾರ ತಯಾರಿಕೆಗೆ ಬೇಕಾಗುವಷ್ಟು ಅಗತ್ಯ ಸಾಮಗ್ರಿಗಳನ್ನು ವಿತರಿಸುವ ಮೂಲಕ ಮಾನವಿಯತೆಗೆ ಸಾಕ್ಷಿಯಾಗಿದ್ದಾರೆ.

By

Published : Apr 3, 2020, 8:51 AM IST

Supply of necessary materials to the laborers from peers
ಗೆಳೆಯರ ಬಳಗದಿಂದ ಕೂಲಿ ಕಾರ್ಮಿಕರಿಗೆ ಅಗತ್ಯ ಸಾಮಗ್ರಿ ವಿತರಣೆ

ಕಲಬುರಗಿ: ಲಾಕ್​​ಡೌನ್​ ಗೆ ಬಳಲಿ ಬೆಂಡಾದ ಬಡ ಹಾಗೂ ಕೂಲಿ ಕಾರ್ಮಿಕರ ಕುಟುಂಬಕ್ಕೆ ವಾಡಿ ಪಟ್ಟಣದ ಗೆಳೆಯರ ಬಳಗ ದಿನಸಿ ಸಾಮಗ್ರಿಗಳನ್ನು ನೀಡುವ ಮೂಲಕ ಮಾನವಿಯತೆ ಮೆರೆದಿದ್ದಾರೆ.

ಜಿಲ್ಲೆಯ ವಾಡಿ ಪಟ್ಟಣದಲ್ಲಿ ನಾಲ್ಕು ಜನ ಗೆಳೆಯರು ತಮ್ಮ ಸ್ವಂತ ದುಡ್ಡಿನಲ್ಲಿ ಕೂಲಿಯನ್ನೆ ಆಧರಿಸಿ ಜೀವನ‌ ನಡೆಸುತ್ತಿದ್ದ ಬಡ ಹಾಗೂ ಕೂಲಿ ಕಾರ್ಮಿಕ ಕುಟುಂಬಗಳಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆ ಸೇರಿದಂತೆ ಆಹಾರ ತಯಾರಿಕೆಗೆ ಬೇಕಾಗುವಷ್ಟು ಅಗತ್ಯ ಸಾಮಗ್ರಿಗಳನ್ನು ವಿತರಿಸುವ ಮೂಲಕ ಮಾನವಿಯತೆಗೆ ಸಾಕ್ಷಿಯಾಗಿದ್ದಾರೆ.

ದಿನಗೂಲಿಯನ್ನೇ ಅವಲಂಬಿಸಿ ಬದುಕುವವರು, ಕೆಲಸ ಕಳೆದುಕೊಂಡುವರನ್ನ ಗುರುತಿಸಿ ಅವರಿಗೆ ಈ ಗೆಳೆಯರ ಬಳಗದ ಅಗತ್ಯ ವಸ್ತುಗಳನ್ನು ನೀಡುತ್ತದ್ದು ಈ ಕಾರ್ಯ ಇತರರಿಗೆ ಮಾದರಿಯಾಗಿದೆ.

ABOUT THE AUTHOR

...view details