ಕರ್ನಾಟಕ

karnataka

ETV Bharat / state

ಸುಭಾಷ್ ರಾಠೋಡ್​  ಒಬ್ಬ ಅವಕಾಶವಾದಿ ರಾಜಕಾರಣಿ : ಉಮೇಶ ಜಾಧವ್​​​ - undefined

ಟಿಕೆಟ್​ ಸಿಗದೇ ಹೋಗಿದ್ದಕ್ಕೆ ಕಾಂಗ್ರೆಸ್​​​​ಗೆ ಜಿಗಿದು ಖರ್ಗೆ ಮೆಚ್ಚಿಸಲು ಯತ್ನಿಸಿದ್ದಾರೆ. ಮೆಚ್ಚಿಸುವ ಭರದಲ್ಲಿ ನನ್ನ ಬಗ್ಗೆ ಟೀಕಿಸಿದ್ದು ಸರಿಯಲ್ಲ ಎಂದರು. ನಾನು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ ಅಮಾನತಾಗಿದೆ ಎಂಬ ಆರೋಪವನ್ನೂ ರಾಠೋಡ್​ ಮಾಡಿದ್ದಾರೆ. ಒಂದು ಕಪ್ಪು ಚುಕ್ಕೆಯಿಲ್ಲದೇ ನನ್ನ ಆರೋಗ್ಯ ಇಲಾಖೆ ಸೇವೆ ಪೂರ್ಣಗೊಳಿಸಿದ್ದೇನೆ. ಹಾಗೊಂದು ವೇಳೆ ಅಮಾನತ್ತಾಗಿದ್ದು ಸಾಬೀತು ಪಡಿಸಿದರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಸವಾಲು ಕೂಡಾ ಹಾಕಿದ್ದಾರೆ ಜಾಧವ್​.

ಸುಭಾಷ್ ರಾಠೋಡ ಪ್ರಭುದ್ವತೆ ಇಲ್ಲದ ರಾಜಕಾರಣಿ ಉಮೇಶ ಜಾಧವ್​​​.

By

Published : Mar 30, 2019, 12:47 PM IST

ಕಲಬುರಗಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಸುಭಾಷ್ ರಾಠೋಡ್​ ಅವಕಾಶವಾದಿ ರಾಜಕಾರಣಿ, ಮೊನ್ನೆಯವರೆಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುತ್ತೇನೆ ನನಗೆ ಟಿಕೆಟ್ ಕೊಡಿ ಎಂದು ದುಂಬಾಲು ಬಿದ್ದವರು, ನಿನ್ನೆ ಖರ್ಗೆ ಅವರನ್ನು ಸೋಲಿಸಲು ಭೂಮಿಯ ಮೇಲೆ ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತಾರೆ. ಇವರೊಬ್ಬ ಪ್ರಬುದ್ಧತೆ ಇಲ್ಲದ ರಾಜಕಾರಣಿ ಎಂದು ಕಲಬುರಗಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ್ ​​​​ವಾಗ್ದಾಳಿ ನಡೆಸಿದ್ದಾರೆ.

ಸುಭಾಷ್ ರಾಠೋಡ ಪ್ರಭುದ್ವತೆ ಇಲ್ಲದ ರಾಜಕಾರಣಿ ಉಮೇಶ ಜಾಧವ್​​​.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್​ ಸಿಗದೇ ಹೋಗಿದ್ದಕ್ಕೆ ಕಾಂಗ್ರೆಸ್​​​​ಗೆ ಜಿಗಿದು ಖರ್ಗೆ ಮೆಚ್ಚಿಸಲು ಯತ್ನಿಸಿದ್ದಾರೆ. ಮೆಚ್ಚಿಸುವ ಭರದಲ್ಲಿ ನನ್ನ ಬಗ್ಗೆ ಟೀಕಿಸಿದ್ದು ಸರಿಯಲ್ಲ ಎಂದರು. ನಾನು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ ಅಮಾನತ್ತಾಗಿದ್ದೆ ಎಂಬ ಆರೋಪವನ್ನೂ ರಾಠೋಡ ಮಾಡಿದ್ದಾರೆ. ಒಂದು ಕಪ್ಪು ಚುಕ್ಕೆಯಿಲ್ಲದೇ ನನ್ನ ಆರೋಗ್ಯ ಇಲಾಖೆ ಸೇವೆ ಪೂರ್ಣಗೊಳಿಸಿದ್ದೇನೆ. ಹಾಗೊಂದು ವೇಳೆ ಅಮಾನತಾಗಿದ್ದು ಸಾಬೀತು ಪಡಿಸಿದರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಸವಾಲು ಹಾಕಿದರು. ನಿರಾಧಾರವಾಗಿ ತೇಜೋವಧೆ ಮಾಡಲು ಈ ರೀತಿಯ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಸುಭಾಷ್ ರಾಠೋಡ್​ ವಿರುದ್ಧ ಉಮೇಶ್ ಜಾಧವ್ ಕಿಡಿ ಕಾರಿದರು‌.

ಇದೇ ವೇಳೆ, ಬಂಜಾರ ಸಮುದಾಯ ಮತ್ತು ಧರ್ಮ ಗುರುಗಳ ದುರ್ಬಳಕೆ ಮಾಡಿಕೊಂಡಿದ್ದಾರೆಂಬ ರಾಠೋಡ್​ ಆರೋಪಕ್ಕೂ ಜಾಧವ್ ತಿರುಗೇಟು ನೀಡಿದರು. ರಾಮರಾವ್ ಮಹಾರಾಜರು ಅನಾರೋಗ್ಯಪೀಡಿತರಾಗದಾಗ ಚಿಕಿತ್ಸೆ ಮಾಡಿಸಿದ್ದೇನೆ. ಅದನ್ನು ಸಲ್ಲದ ರೀತಿಯಲ್ಲಿ ಅರ್ಥೈಸಿಕೊಂಡು ಅಪಪ್ರಚಾರ ಮಾಡೋದು ಸರಿಯಲ್ಲ, ಬಂಜಾರ ಸಮುದಾಯ ಮತ್ತು ಧರ್ಮಗುರುಗಳು ನನ್ನ ಬೆನ್ನಿಗಿದ್ದಾರೆ ಕಲಬುರಗಿ ಲೋಕಸಭೆಯಲ್ಲಿ ನನ್ನ ಗೆಲುವು ಶತಸಿದ್ಧ ಎಂಬ ವಿಶ್ವಾಸ ಉಮೇಶ್ ಜಾಧವ್ ಅವರದ್ದು.

For All Latest Updates

TAGGED:

ABOUT THE AUTHOR

...view details