ಕರ್ನಾಟಕ

karnataka

ETV Bharat / state

ಕಲಬುರಗಿ: ರಾತ್ರಿ ಊಟ ಸೇವಿಸಿದ ವಸತಿ‌ ನಿಲಯದ ವಿದ್ಯಾರ್ಥಿನಿಯರು ಅಸ್ವಸ್ಥ - Contamination of water and food

ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ರಾತ್ರಿ ಊಟ ಸೇವಿಸಿದ ನಂತರ ಅಸ್ವಸ್ಥರಾಗಿದ್ದಾರೆ.

ಸೇಡಂ ತಾಲೂಕಾಸ್ಪತ್ರೆ
ಸೇಡಂ ತಾಲೂಕಾಸ್ಪತ್ರೆ

By

Published : Jun 19, 2023, 4:54 PM IST

ವಸತಿ‌ ನಿಲಯದ ವಿದ್ಯಾರ್ಥಿನಿಯರು ಅಸ್ವಸ್ಥ

ಕಲಬುರಗಿ : ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ಕಳೆದ ರಾತ್ರಿ ಊಟ ಸೇವಿಸಿದ ನಂತರ ವಾಂತಿ, ಭೇದಿ ಹಾಗು ಹೊಟ್ಟೆ, ತಲೆ ನೋವಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಸತಿ ಶಾಲೆಯಲ್ಲಿ ಒಟ್ಟು 176 ವಿದ್ಯಾರ್ಥಿಗಳಿದ್ದು, ರಾತ್ರಿ 10 ಗಂಟೆ ಸುಮಾರಿಗೆ 23 ವಿದ್ಯಾರ್ಥಿಗಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಸೇಡಂ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಇಂದು (ಸೋಮವಾರ) ಬೆಳಗ್ಗೆ ಮತ್ತೆ 10 ವಿದ್ಯಾರ್ಥಿನಿಯರಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಸೇಡಂ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಎಲ್ಲ 33 ವಿದ್ಯಾರ್ಥಿನಿಯರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ನೀರು, ಆಹಾರ ಕಲುಷಿತ ಕಾರಣ ಸಾಧ್ಯತೆ: ಮೇಲ್ನೋಟಕ್ಕೆ, ಫುಡ್ ಪಾಯಿಸನ್ ಆಗಿರುವಂತೆ ಕಂಡು ಬಂದಿದೆ. ವಿದ್ಯಾರ್ಥಿನಿಯರು ಸೇವಿಸಿದ ನೀರು ಮತ್ತು ಆಹಾರ ಕಲುಷಿತಗೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೆಲವು ದಿನಗಳಿಂದ ಸ್ಥಳೀಯ ಫ್ಯಾಕ್ಟರಿಯೊಂದರಿಂದ ರಾಸಾಯನಿಕ ಪದಾರ್ಥ ಹೊರ ಬಿಡುತ್ತಿದ್ದು, ಇದರಿಂದ ಸಾರ್ವಜನಿಕರಲ್ಲಿ ತಲೆನೋವು, ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದೆ. ವಿದ್ಯಾರ್ಥಿನಿಯರು ಅಸ್ವಸ್ಥರಾಗಲು ಇದೇ ಕಾರಣ ಇರಬಹುದು ಎಂದು ಹೇಳಲಾಗ್ತಿದೆ.

ಕ್ರಮ‌ಕ್ಕೆ ಒತ್ತಾಯ:ವಸತಿ ಶಾಲೆಯ ವಾರ್ಡನ್ ಘಟನೆಗೆ ಫ್ಯಾಕ್ಟರಿಯ ದುರ್ವಾಸನೆಯೇ ಕಾರಣ ಎನ್ನುತ್ತಿದ್ದಾರೆ. ವಾರ್ಡನ್ ಮಾತಿನಂತೆ ದುರ್ವಾಸನೆಯೇ ಕಾರಣವೆನ್ನುವುದಾದ್ರೆ, ಅದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ತೊಂದರೆಯಾಗುತ್ತಾ?. ಅಲ್ಲಿನ ಟೀಚರ್ಸ್​ ಹಾಗೂ ಗ್ರಾಮಸ್ಥರಿಗೆ ಯಾಕೆ ಏನೂ ಆಗಿಲ್ಲ. ಫ್ಯಾಕ್ಟರಿಯಿಂದ ಸಾರ್ವಜನಿಕರಿಗೆ ತೊಂದರೆ‌ ಆಗಿಲ್ಲ. ವಾರ್ಡನ್​ ತಮ್ಮ ತಪ್ಪು ಮುಚ್ಚಿಕೊಳ್ಳಲು ಪೋಷಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾ ಅನ್ನೋದು ಸ್ಥಳೀಯರ ಆಕ್ರೋಶ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ‌ ಕ್ರಮ‌ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಫ್ಯಾಕ್ಟರಿಯ ಹೊಗೆಯಿಂದ ಈ ರೀತಿ ಆಗಿದೆ: "ಫ್ಯಾಕ್ಟರಿಯ ಹೊಗೆ ಕೆಟ್ಟದಾಗಿ ಬರುತ್ತದೆ. ಅದನ್ನು ತೆಗೆದುಕೊಂಡರೆ ವಾಂತಿ ಬರುತ್ತದೆ. ಒಮ್ಮಿಂದೊಮ್ಮೆಲೆ ತಲೆನೋವು, ಹೊಟ್ಟೆನೋವು ಆಗುತ್ತದೆ. ಎಲ್ಲರಿಗೂ ಹೀಗೆಯೇ ಆಗಿದೆ. ಮುಂಜಾನೆ 20 ಜನರಿಗೆ ಹಾಗೂ ಉಳಿದವರಿಗೆ ರಾತ್ರಿ ಇದೇ ರೀತಿ ಆಗಿದೆ" ಅಂತಾರೆ ವಿದ್ಯಾರ್ಥಿನಿ.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ. ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವುದಕ್ಕೆ ನಿಖರ ಕಾರಣ ಸೋಮವಾರ ಸಂಜೆಯ ವೇಳೆಗೆ ತಿಳಿದು ಬರಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :ಸ್ನೇಹಿತರ ಜಾಲಿ ರೈಡ್​ಗೆ ಫುಡ್ ಡೆಲಿವರಿ ಬಾಯ್​​ ಬಲಿ.. ಅಪಘಾತ ಎಸಗಿ ಮೃತದೇಹ 100 ಮೀಟರ್​ ಎಳೆದೊಯ್ದರು!

ABOUT THE AUTHOR

...view details