ಕಲಬುರಗಿ:ನಗರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಉತ್ತೀರ್ಣರಾಗಿರಲಿಲ್ಲ. ಮತ್ತೆ ಪರೀಕ್ಷೆಯನ್ನು ಬರೆದು ಪಾಸ್ ಆಗ್ಬೇಕು ಎಂಬ ಆಸೆಯನ್ನು ವಿದ್ಯಾರ್ಥಿಗಳ ಬ್ಯಾಚ್ವೊಂದು ಅರ್ಧಕ್ಕೆ ನಿಲ್ಲಿಸಿದೆ. ಅಲ್ಲದೇ, ನಂತರ ಎಣ್ಣೆ ಹೊಡೆಯೋದಕ್ಕೆ ಶುರು ಮಾಡಿದ ಅವರು ದುಡ್ಡು ಇದ್ದಾಗ ಹೈಫೈ ಬ್ರ್ಯಾಂಡ್ ಎಣ್ಣೆ ಕುಡಿದು ಮಜಾ ಮಾಡಿದ್ದಾರೆ. ಕೊನೆಗೆ ಹಣ ಖಾಲಿಯಾದಾಗ ವೈನ್ ಶಾಪ್ಗೆ ಕನ್ನ ಹಾಕಿದ್ದಾರೆ. ಇದೀಗ ಅವರು ಪೊಲೀಸರ ಅತಿಥಿಗಳಾಗಿದ್ದಾರೆ.
ನಗರದ ವಿವಿಧ ಬಡವಾಣೆಯ ನಿವಾಸಿಗಳಾದ ತುಷಾರ್, ಗುರುರಾಜ್, ಮೋಹನ್ ಎಂಬ ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಬಿದ್ದು ಪಿಯುಸಿಯಲ್ಲಿ ಢುಮುಕಿ ಹೊಡೆದು ಪಿಯುಸಿಯಲ್ಲಿ ಫೆಲ್ಯೂವರ್ ಬ್ಯಾಚ್ ಅಂತಾನೆ ಫೇಮಸ್ ಆಗಿದ್ದರು. ಕಳೆದ ತಿಂಗಳು ನಗರದ ಹೊರವಲಯದ ಕೋಟನೂರ ಬಡಾವಣೆಯಲ್ಲಿರುವ ವೈನ್ ಶಾಪ್ ಬಾಗಿಲು ಮುರಿದು, ಹೈ ಫೈ ಬ್ರ್ಯಾಂಡ್ನ ಮದ್ಯದ ಬಾಟಲಿಗಳನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು.