ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಭಾರಿ ಮಳೆ - ವಿದ್ಯಾರ್ಥಿನಿಯರ ಮೇಲೆ ಕುಸಿದ ಕಟ್ಟಡದ ಮೇಲ್ಛಾವಣಿ - ಕಲಬುರಗಿ ಮಳೆ

ಕಲಬುರಗಿ ಜೆಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಭಾರಿ ಮಳೆಯಿಂದ ಕ್ಲಾಸ್ ರೂಮ್ ಮೇಲ್ಛಾವಣಿ‌ ಕುಸಿತವಾಗಿ ಮೂವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ.

ವಿದ್ಯಾರ್ಥಿನಿ
ವಿದ್ಯಾರ್ಥಿನಿ

By

Published : Aug 4, 2022, 7:56 PM IST

ಕಲಬುರಗಿ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ವಿದ್ಯಾರ್ಥಿಗಳು ಪಾಠ ಕೇಳುವಾಗಲೇ ಕ್ಲಾಸ್ ರೂಮ್ ಮೇಲ್ಛಾವಣಿ‌ ಕುಸಿತವಾಗಿ ಮೂವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ‌ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ.

ಕಟ್ಟಡದ ಮೇಲ್ಛಾವಣಿ ಕುಸಿದಿರುವುದು

ಗ್ರಾಮದ ಕರ್ನಾಟಕ ಪಬ್ಲಿಕ್ ಕಾಲೇಜಿನಲ್ಲಿ ಅವಘಡ ಸಂಭವಿಸಿದ್ದು, ನಿಖಿತಾ ಎಂಬ ಪ್ರಥಮ‌ ಪಿಯುಸಿ ವಿದ್ಯಾರ್ಥಿನಿ ತಲೆಗೆ ತೀವ್ರ ಪೆಟ್ಟಾಗಿದೆ. ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ‌ ಗಾಯಗೊಂಡವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಕಲಬುರಗಿಯಲ್ಲಿ ಭಾರಿ ಮಳೆಯಿಂದಾಗಿ ವಿದ್ಯಾರ್ಥಿನಿಯರ ಮೇಲೆ ಕಟ್ಟಡದ ಮೇಲ್ಛಾವಣಿ ಕುಸಿತವಾಗಿರುವುದು

ಕಾಲೇಜಿನ ಕಟ್ಟಡ ಹಳೆಯದಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಶಿಥಿಲಗೊಂಡು ಅವಾಂತರ ಸೃಷ್ಟಿಯಾಗಿದೆ. ಮೇಲ್ಛಾವಣಿ ಕುಸಿದ ತಕ್ಷಣ ಉಳಿದ ವಿದ್ಯಾರ್ಥಿಗಳು, ಶಿಕ್ಷಕಿ ಕ್ಲಾಸ್ ರೂಮ್​ನಿಂದ ಹೊರಗೋಡಿ ಬಂದು ಸುರಕ್ಷಿತವಾಗಿದ್ದಾರೆ.‌

ಓದಿ:ಬೆಂಗಳೂರಿಗರೇ ಹುಷಾರ್​: ಫುಟ್​ಪಾತ್ ಬ್ಲಾಕ್ ಮಾಡಿದ್ರೆ ಸಿಆರ್​ಪಿಸಿ ಅಡಿ ಕೇಸ್

ABOUT THE AUTHOR

...view details