ಕಲಬುರಗಿ : ಶಿಕ್ಷಕರೊಂದಿಗೆ ಶಾಲಾ ಪ್ರವಾಸಕ್ಕೆ ತೆರಳಿದ್ದ ನಾಲ್ಕನೇ ತರಗತಿ ವಿದ್ಯಾರ್ಥಿನಿ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಡ್ಯಾಮ್ ನಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಭಾವನಾ ಉದಯ್ ಪಾಟೀಲ್ (9) ಎಂದು ಗುರುತಿಸಲಾಗಿದೆ.
ಕಲಬುರಗಿಯ ಸಂತೋಷ ಕಾಲೋನಿ ನಿವಾಸಿಯಾಗಿದ್ದ ಭಾವನಾ ಇಲ್ಲಿನ ಕಲಾ ವಿದ್ಯಾಮಂದಿರ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದಳು. ಇಂದು ಶಾಲೆಯ ವತಿಯಿಂದ ಒಂದು ದಿನದ ಪ್ರವಾಸಕ್ಕೆಂದು ವಿದ್ಯಾರ್ಥಿಗಳೆಲ್ಲ ಚಂದ್ರಂಪಳ್ಳಿ ಡ್ಯಾಮ್ಗೆ ಹೋಗಿದ್ದು, ಈ ವೇಳೆ ಭಾವನಾ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.