ಕರ್ನಾಟಕ

karnataka

ETV Bharat / state

ನೆಗೆಟಿವ್ ಪತ್ರ ಇಲ್ಲದಿದ್ದರೆ ಅಂಗಡಿ ಪರವಾನಿಗೆ ರದ್ದು: ಸೇಡಂ ತಹಶೀಲ್ದಾರ್

ಮಾರುಕಟ್ಟೆಯ ತರಕಾರಿ, ಕಿರಾಣಿ, ಹೋಟೆಲ್​, ಲಾಡ್ಜ್, ಮೆಡಿಕಲ್, ಬೀಡಾ ಅಂಗಡಿ ಸೇರಿದಂತೆ ಎಲ್ಲಾ ವ್ಯಾಪಾರಿಗಳು ತಮ್ಮ ಸಿಬ್ಬಂದಿಯ ಜೊತೆಗೆ ಕೊರೊನಾ ಲಸಿಕೆ ಪಡೆಯಬೇಕು ಮತ್ತು ಕೋವಿಡ್ ನೆಗೆಟಿವ ಸರ್ಟಿಫಿಕೆಟ್ ಹೊಂದಿರಬೇಕು. ಇಲ್ಲವಾದಲ್ಲಿ ಮುಲಾಜಿಲ್ಲದೆ ಪರವಾನಿಗೆ ರದ್ದುಪಡಿಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಸೇಡಂ ತಹಶೀಲ್ದಾರ್
ಸೇಡಂ ತಹಶೀಲ್ದಾರ್

By

Published : Apr 1, 2021, 9:39 PM IST

ಸೇಡಂ: ಕೊರೊನಾ ನೆಗೆಟಿವ್ ಪ್ರಮಾಣ ಪತ್ರ ಇಲ್ಲದ ವ್ಯಾಪಾರಿಗಳ ಪರವಾನಿಗೆ ರದ್ದು ಮಾಡಲಾಗುವುದು ಎಂದು ತಹಶೀಲ್ದಾರ್​ ಬಸವರಾಜ ಬೆಣ್ಣೆಶಿರೂರ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಆದರೆ ಜನರು ಲಸಿಕೆ ಹಾಕಿಸಿಕೊಳ್ಳುವಲ್ಲಿ ಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ. ಹಾಗಾಗಿ ಕಠಿಣ ಕ್ರಮಗಳನ್ನು ಅನುಸರಿಸಲಾಗುತ್ತಿದ್ದು, ಮಾರುಕಟ್ಟೆಯ ತರಕಾರಿ, ಕಿರಾಣಿ, ಹೋಟಲ್​, ಲಾಡ್ಜ್, ಮೆಡಿಕಲ್, ಬೀಡಾ ಅಂಗಡಿ ಸೇರಿದಂತೆ ಎಲ್ಲಾ ವ್ಯಾಪಾರಿಗಳು ತಮ್ಮ ಸಿಬ್ಬಂದಿಯ ಜೊತೆಗೆ ಕೊರೊನಾ ಲಸಿಕೆ ಪಡೆಯಬೇಕು ಮತ್ತು ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಹೊಂದಿರಬೇಕು. ಇಲ್ಲವಾದಲ್ಲಿ ಮುಲಾಜಿಲ್ಲದೆ ಪರವಾನಿಗೆ ರದ್ದುಪಡಿಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಈಗಾಗಲೇ ತಾಲೂಕಿನಲ್ಲಿ 8 ಪಿ.ಹೆಚ್.ಸಿ. ಮತ್ತು 2 ಸಿ.ಹೆಚ್.ಸಿ. ಒಳಗೊಂಡು 26 ಕೇಂದ್ರಗಳನ್ನು ಕೋವಿಡ್ ಲಸಿಕೆ ನೀಡಲು ತೆರೆಯಲಾಗಿದೆ. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಪಿಕಪ್ ಡ್ರಾಪ್ ಪದ್ಧತಿ ಬಳಸಲಾಗುತ್ತಿದ್ದು, ಸರ್ಕಾರಿ ವಾಹನದಲ್ಲಿ ಜನರನ್ನು ಲಸಿಕಾ ಕೇಂದ್ರಗಳಿಗೆ ಕರೆದೊಯ್ದು, ಮತ್ತೆ ಮನೆವರೆಗೆ ತಂದು ಬಿಡುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಾರ್ವಜನಿಕ ಸಭೆ ಸಮಾರಂಭಗಳು, ಮದುವೆ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯವಾಗಿದ್ದು, 45 ವರ್ಷ ಮೇಲ್ಪಟ್ಟವರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಾದರೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದು ನೆಗೆಟಿವ್ ಪತ್ರ ಪಡೆದಿರಬೇಕು. ಲಸಿಕೆ ಬಗ್ಗೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದರು.

ABOUT THE AUTHOR

...view details