ಕರ್ನಾಟಕ

karnataka

ETV Bharat / state

ಅವಧಿ ಮುಗಿದ 54 ಬಸ್​​​ಗಳ ಓಡಾಟ: ಆತಂಕದಲ್ಲಿ ಪ್ರಯಾಣಿಕರು - still Running 54 old buses in NEKRTC

ಕಲಬುರಗಿ ಜಿಲ್ಲೆಯ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 476 ಬಸ್​​ಗಳಿದ್ದು, ಅದರಲ್ಲಿ 54 ಹಳತಾದ ಬಸ್‌ಗಳು ಸಂಚರಿಸುತ್ತಿವೆ. ಉಳಿದ 422 ಬಸ್‌ಗಳ ಸ್ಥಿತಿ ಚೆನ್ನಾಗಿದೆ.

North East Karnataka Road Transport Corporation
ಈಶಾನ್ಯ ಕರ್ನಾಟಕ ಸಾರಿಗೆ

By

Published : Nov 14, 2020, 6:04 PM IST

ಕಲಬುರಗಿ:ಸಾರಿಗೆ ಇಲಾಖೆಯಲ್ಲಿ ಒಂದು ಬಸ್​​​​ನ ಜೀವಿತಾವಧಿ ಇಂತಿಷ್ಟು ಕಿಲೋಮೀಟರ್‌ ಎಂದು ನಿಗದಿಯಾಗಿರುತ್ತದೆ. ಆದರೆ, ಜಿಲ್ಲೆಯ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 54 ಹಳತಾದ ಬಸ್‌ಗಳು ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ಆತಂಕ ಎದುರಾಗಿದೆ.

ಜಿಲ್ಲೆಯ ಚಿಂಚೋಳಿ, ಸೇಡಂ, ಕಾಳಗಿ, ಚಿತ್ತಾಪುರ ಹಾಗೂ ಕಲಬುರಗಿಯಲ್ಲಿ ಎರಡು ಘಟಕ ಸೇರಿ ಒಟ್ಟು 6 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು 476 ಬಸ್​​ಗಳು ನಿತ್ಯ ಕಾರ್ಯಾಚರಣೆ ನಡೆಸುತ್ತಿವೆ. ಕೋವಿಡ್ ಹಿನ್ನೆಲೆ 380 ಬಸ್​​ಗಳು ಮಾತ್ರ ರಸ್ತೆಗಿಳಿದಿವೆ.

ನಿಗದಿತ 9 ಲಕ್ಷ ಕಿಲೋ ಮೀಟರ್ ಓಡಾಟದ ಗಡಿ ದಾಟಿದ 54 ಬಸ್‌ಗಳು ಸಹ ರಸ್ತೆಗೆ ಇಳಿಯುತ್ತಿವೆ. ಆದರೆ, ಅಷ್ಟು ಕಿಮೀ ಸಂಚರಿಸಿದ ಬಸ್​​ಗಳು ರಸ್ತೆಗಿಳಿಯುವುದು ಸೂಕ್ತವಲ್ಲ. ಇದು ಪ್ರಯಾಣಿಕರಿಗೂ ಹೆಚ್ಚು ಅಸುರಕ್ಷತೆ. ಯಾವ ಸಂದರ್ಭದಲ್ಲಿ ಬೇಕಾದರೂ ಮಾರ್ಗ ಮಧ್ಯೆ ಕೆಟ್ಟು ನಿಲ್ಲಬಹುದು. ಜೊತೆಗೆ ವಾಯು ಮಾಲಿನ್ಯ ಹೆಚ್ಚು ಸೃಷ್ಟಿಸುತ್ತವೆ. ಅವುಗಳ ದುರಸ್ತಿಗಾಗಿ ಹಣ ಕೂಡಾ ವ್ಯರ್ಥ. ಹೀಗಾಗಿ, ಹಳೆ ಬಸ್ ಓಡಾಟ ನಿಲ್ಲಿಸಿ ಹೊಸ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಜನರ ಆಗ್ರಹ.

ಜಿಲ್ಲಾ ಸಾರಿಗೆ ನಿಯಂತ್ರಣಾಧಿಕಾರಿ ಸಂತೋಷ್​​ ಕುಮಾರ್​​

ನಿಗದಿತ 9 ಲಕ್ಷ ಕಿ.ಮೀ ಸಂಚರಿಸಿದ ನಂತರ ಅವುಗಳ ಫಿಟ್​​ನೆಸ್ ನೋಡಿಕೊಂಡು ರಸ್ತೆಗೆ ಇಳಿಸಲಾಗುತ್ತದೆ. ಉಳಿದ 422 ಬಸ್‌ಗಳ ಸ್ಥಿತಿ ಉತ್ತಮವಾಗಿದೆ. ಶಾಲಾ-ಕಾಲೇಜು ಪ್ರಾರಂಭವಾದ ನಂತರ ಅಗತ್ಯಕ್ಕೆ ತಕ್ಕಂತೆ ಬಸ್ ಓಡಿಸಲಾಗುವುದು. ಅಲ್ಲದೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) 50 ಹೊಸ ಬಸ್​​​ಗಳಿಗೆ ಬೇಡಿಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೊಸ ಬಸ್ ಬಂದ ಬಳಿಕ ಹಳೆಯ ಬಸ್ ಓಡಾಟ ನಿಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details