ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಕೊರೊನಾ ವ್ಯಾಕ್ಸಿನ್ ಡ್ರೈ ರನ್‌‌ಗೆ ಚಾಲನೆ - ವ್ಯಾಕ್ಸಿನ್ ಡ್ರೈ ರನ್‌‌

ನಗರದ ಅಶೋಕನಗರ ಬಡಾವಣೆಯ ನಗರ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಕೊರೊನಾ ವ್ಯಾಕ್ಸಿನ್ ನೀಡಲಾಗುತ್ತಿದೆ.

start to Corona Vaccine Dry Run in Kalburagi
ಕಲಬುರಗಿಯಲ್ಲಿ ಕೊರೊನಾ ವ್ಯಾಕ್ಸಿನ್ ಡ್ರೈ ರನ್‌‌ಗೆ ಚಾಲನೆ

By

Published : Jan 2, 2021, 11:12 AM IST

Updated : Jan 2, 2021, 11:52 AM IST

ಕಲಬುರಗಿ:ಮಹಾಮಾರಿ‌ ಕೊರೊನಾಗೆ ಮೊದಲ ಬಲಿಯಾದ ಜಿಲ್ಲೆಯಲ್ಲಿ ಬಹುನಿರೀಕ್ಷಿತ ಕೋವಿಡ್-19 ವ್ಯಾಕ್ಸಿನ್ ಡ್ರೈ ರನ್‌‌ಗೆ ಚಾಲನೆ‌ ನೀಡಲಾಗಿದೆ.

ಕೊರೊನಾ ವ್ಯಾಕ್ಸಿನ್ ಡ್ರೈ ರನ್‌‌ಗೆ ಚಾಲನೆ

ನಗರದ ಅಶೋಕನಗರ ಬಡಾವಣೆಯ ನಗರ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಕೊರೊನಾ ವ್ಯಾಕ್ಸಿನ್ ನೀಡಲಾಗುತ್ತಿದೆ. ಈಗಾಗಲೇ ಕೋವಿಡ್ ಆ್ಯಪ್‌ನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳ ಹೆಸರನ್ನ ನೋಂದಣಿ ಮಾಡಲಾಗಿದ್ದು, ಅಶೋಕ ನಗರದ ಆರೋಗ್ಯ ಕೇಂದ್ರ, ಗ್ರಾಮೀಣ ಭಾಗದ ಅವರಾದ್‌ನ ಸಮುದಾಯ ಆರೋಗ್ಯ ಕೇಂದ್ರ ಮತ್ತು ಜೇವರ್ಗಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಜಿಲ್ಲೆಯ ಮೂರು ಕಡೆ ಕೋವಿಡ್ ಡ್ರೈರನ್‌ಗೆ ಚಾಲನೆ ನೀಡಲಾಗಿದೆ. ತಲಾ ಒಂದು ಆರೋಗ್ಯ ಕೇಂದ್ರಗಳಲ್ಲಿ ಪ್ರಾಥಮಿಕ ಹಂತದಲ್ಲಿ 25 ಹೆಲ್ತ್ ವರ್ಕರ್ಸ್‌ಗಳಿಗೆ ಲಸಿಕೆ‌ ನೀಡಲಾಗುತ್ತಿದೆ. ಬೆಳಗ್ಗೆ 10 ಗಂಟೆಗೆ ಆರಂಭವಾಗಿರುವ ಡ್ರೈ ರನ್ ಲಸಿಕೆ, ಮಧ್ಯಾಹ್ನ 2 ಗಂಟೆವರೆಗೆ ನಡೆಯಲಿದೆ.

ಓದಿ : ರಾಜ್ಯದ ಐದು ಜಿಲ್ಲೆಗಳಲ್ಲಿ ಕೊರೊನಾ ವ್ಯಾಕ್ಸಿನ್​ ಡ್ರೈ ರನ್ ಶುರು: ಹೀಗಿದೆ ಲಸಿಕೆ ನೀಡುವ ಪ್ರಕ್ರಿಯೆ!

ಕೋವಿಡ್-19 ವ್ಯಾಕ್ಸಿನ್ ನೀಡುವುದು ಹೇಗೆ, ವ್ಯಾಕ್ಸಿನ್ ಪಡೆದವರಿಗೆ ಆರೈಕೆ ಹೇಗೆ ಮಾಡುವ ಡೆಮೋ ನೀಡಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕವಾಗಿ ವೇಟಿಂಗ್ ಹಾಲ್, ಅಬ್ಸರ್ವೇಷನ್ ಹಾಲ್ ನಿರ್ಮಾಣ ಮಾಡಲಾಗಿದೆ.

Last Updated : Jan 2, 2021, 11:52 AM IST

ABOUT THE AUTHOR

...view details