ಕಲಬುರಗಿ: ಜಿಲ್ಲೆಯ ದೇವಣ ತೆಗ್ಗನೂರ್ ಗ್ರಾಮದ ಆರಾಧ್ಯ ದೈವ ಶ್ರೀ ಶಿವಯೋಗೇಶ್ವರ ಅವರ ಭವ್ಯ ರಥೋತ್ಸವವು ಅಪಾರ ಜನಸಾಗರದ ಮಧ್ಯೆ ಸಂಭ್ರಮದಿಂದ ಜರುಗಿತು.
ವಿಜೃಂಭಣೆಯಿಂದ ಜರುಗಿದ ಶ್ರೀ ಶಿವಯೋಗೇಶ್ವರ ರಥೋತ್ಸವ - undefined
ದೇವಣ ತೆಗ್ಗನೂರ್ ಗ್ರಾಮದಲ್ಲಿ ಆರಾಧ್ಯ ದೈವ ಶ್ರೀ ಶಿವಯೋಗೇಶ್ವರ ಅವರ ಭವ್ಯ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.
ವಿಜೃಂಭಣೆಯಿಂದ ಜರುಗಿದ ಶ್ರೀ ಶಿವಯೋಗೆಶ್ವರ ರಥೋತ್ಸವ
ರಥೋತ್ಸವದ ನಿಮಿತ್ಯ ಬೆಳಗ್ಗೆಯಿಂದಲೇ ವಿಶೇಷ ಪೂಜೆ ನಡೆಸಲಾಯಿತು. ವಿವಿಧ ಜಿಲ್ಲೆಯಿಂದ ಮಾತ್ರವಲ್ಲದೆ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಭಾಗವಹಿಸುವ ಮೂಲಕ ದೇವರ ದರ್ಶನ ಪಡೆದುಕೊಂಡರು,ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಶಿವಯೋಗೇಶ್ವರರ ರಥೋತ್ಸವ ಸಂಭ್ರಮದಿಂದ ನಡೆಯಿತು. ಭಕ್ತರು ತೇರಿಗೆ ಉತ್ತತ್ತಿ, ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.