ಕರ್ನಾಟಕ

karnataka

ETV Bharat / state

ಕಲಬುರಗಿ: ನಳಿನ್​ ಕುಮಾರ್ ಕಟೀಲ್, ಕೆ.ಎಸ್​. ಈಶ್ವರಪ್ಪ ಕೊರೊನಾದಿಂದ ಗುಣಮುಖರಾಗಲೆಂದು ಹೋಮ - ishwarappa tested positive

ಸಚಿವ ಕೆ.ಎಸ್​. ಈಶ್ವರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​ಗೆ ಕೊರೊನಾ ಸೋಂಕು ತಗುಲಿದ್ದು, ಇಬ್ಬರೂ ಬೇಗ ಗುಣಮುಖರಾಗಲೆಂದು ಕಲಬುರಗಿಯಲ್ಲಿ ಹೋಮ-ಹವನ ನಡೆಸಲಾಯಿತು.

special pooja for nalin kumar katil and ishwarappa
ಹೋಮ

By

Published : Sep 6, 2020, 4:29 PM IST

ಕಲಬುರಗಿ:ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್ ಹಾಗೂ ಸಚಿವ ಕೆ.ಎಸ್​. ಈಶ್ವರಪ್ಪಗೆ ಕೊರೊನಾ ಸೋಂಕು ಬಂದಿರೋ ಹಿನ್ನೆಲೆ ಇಬ್ಬರೂ ಶೀಘ್ರ ಗುಣಮುಖರಾಗಲೆಂದು ಕಲಬುರಗಿಯಲ್ಲಿ ಹೋಮ ನಡೆಸಲಾಯಿತು.

ನಳಿನ್​ ಕುಮಾರ್ ಕಟೀಲ್ ಹಾಗೂ ಸಚಿವ ಕೆ.ಎಸ್​. ಈಶ್ವರಪ್ಪ ಶೀಘ್ರ ಗುಣಮುಖರಾಗಲೆಂದು ಕಲಬುರಗಿಯಲ್ಲಿ ಹೋಮ ನಡೆಸಲಾಯಿತು.

ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಶರಣಪ್ಪ ತಳವಾರ ನೇತೃತ್ವದಲ್ಲಿ ಕಲಬುರಗಿಯ ಲಕ್ಷ್ಮಿನಾರಾಯಣ ದೇವಸ್ಥಾನದಲ್ಲಿ ಬಿಜೆಪಿ ಮುಖಂಡರು ಧನ್ವಂತರಿ ಹೋಮ ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮದ ಶಶಿಕಲಾ ಟೆಂಗಳಿ, ಮುಖಂಡರಾದ ಧರ್ಮಣ್ಣ ದೊಡ್ಮನಿ ಮತ್ತಿತರರು ಉಪಸ್ಥಿತರಿದ್ದರು. ಹೋಮದ ಜೊತೆ ವಿಶೇಷ ಪೂಜೆ ನೆರವೇರಿಸಿದ ಮುಖಂಡರು ಇಬ್ಬರೂ ನಾಯಕರು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.

ABOUT THE AUTHOR

...view details