ಕಲಬುರಗಿ:ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದುವಿಶ್ವಕಪ್ಪಂದ್ಯ ನಡೆಯುತ್ತಿರುವ ಹಿನ್ನೆಲೆ ಭಾರತದ ಗೆಲುವಿಗಾಗಿ ಕಲಬುರ್ಗಿಯ ದೇವಸ್ಥಾನವೊಂದರಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ವಿಶ್ವಕಪ್ನಲ್ಲಿ ಭಾರತದ ಗೆಲುವಿಗಾಗಿ ವಿಶೇಷ ಪೂಜೆ - ಪೂಜೆ
ವಿಶ್ವಕಪ್ನಲ್ಲಿ ಇಂಡಿಯಾ ಟೀಮ್ ಗೆಲ್ಲುವಂತಾಗಲಿ ಎಂದು ಪ್ರಾರ್ಥಿಸಿ ಕಲಬುರಗಿಯಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯ್ತು.
![ವಿಶ್ವಕಪ್ನಲ್ಲಿ ಭಾರತದ ಗೆಲುವಿಗಾಗಿ ವಿಶೇಷ ಪೂಜೆ](https://etvbharatimages.akamaized.net/etvbharat/prod-images/768-512-3513795-thumbnail-3x2-surya.jpg)
ನಗರದ ಪ್ರಸಿದ್ಧ ದೇವಾಲಯ ಕೋರಂಟಿ ಹನುಮಾನ ಮಂದಿರಕ್ಕೆ ತೆರಳಿದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಮಹಿಳಾ ಮುಖಂಡೆ ದಿವ್ಯಾ ಹಾಗರಗಿ ನೇತೃತ್ವದಲ್ಲಿ ಪೂಜೆ ಸಲ್ಲಿಸಿ, ಭಾರತ ಇಂದಿನ ಪಂದ್ಯದಲ್ಲಿ ಜಯಶಾಲಿಯಾಗಲಿ ಎಂದು ಪ್ರಾರ್ಥಿಸಿದರು.
ಇನ್ನು ಜೂನ್ 16 ರಂದು ನಡೆಯಲಿರುವ ಭಾರತ - ಪಾಕಿಸ್ತಾನ ಪಂದ್ಯದಲ್ಲಿಯೂ ಪಾಕಿಸ್ತಾನದ ವಿರುದ್ಧ ಭಾರತಿಯ ಕ್ರಿಕೆಟ್ ತಂಡ ಭರ್ಜರಿ ಜಯಸಾಧಿಸಲಿ ಎಂದು ದೇವರಲ್ಲಿ ಬೇಡಿಕೊಂಡರು. ಈ ಬಾರಿಯ ವಿಶ್ವಕಪ್ ಭಾರತದ ಮುಡಿಗೇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಭಾರತ ಕೊಹ್ಲಿ ಪಡೆ ಈ ಬಾರಿ ವಿಶ್ವ ಕಪ್ ಗೆದ್ದು ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.