ಕರ್ನಾಟಕ

karnataka

ETV Bharat / state

ಉತ್ತರ ಕರ್ನಾಟಕದ ರಾಜಕಾರಣಿಗಳು ಬಹಳ ಮುಗ್ಧರು: ಸಾಮಾಜಿಕ ಕಾರ್ಯಕರ್ತ ಮುಲಾಲಿ

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಕುರಿತು ಮುಲಾಲಿ ಪ್ರತಿಕ್ರಿಯೆ ನೀಡಿದರು. ಉತ್ತರ ಕರ್ನಾಟಕದ ರಾಜಕಾರಣಿಗಳು ಬಹಳ ಮುಗ್ಧರಿದ್ದಾರೆ, ಅವರ ಮಗ್ಧತೆ ಬಳಸಿಕೊಂಡು ಖೆಡ್ಡಾ ತೋಡಲಾಗ್ತಿದೆ‌. ವಿನಾಕಾರಣ ನಮ್ಮ ಭಾಗದ ಮುಗ್ಧ ರಾಜಕಾರಣಿಗಳ ವಿರುದ್ಧ ಷಡ್ಯಂತ್ರ ಮಾಡಲಾಗ್ತಿದೆ ಎಂದರು.

social-activist-rajasekhara-mulali-
ಸಾಮಾಜಿಕ ಕಾರ್ಯಕರ್ತ ಮುಲಾಲಿ

By

Published : Mar 6, 2021, 4:37 PM IST

ಕಲಬುರಗಿ:ಉತ್ತರ ಕರ್ನಾಟಕದ ರಾಜಕಾರಣಿಗಳು ಬಹಳ ಮುಗ್ಧರು. ಅವರ ಮಗ್ಧತೆ ಬಳಸಿಕೊಂಡು ಖೆಡ್ಡಾ ತೋಡಲಾಗ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಮುಲಾಲಿ

ಓದಿ: ಕೆರೆಗಳ ಬಫರ್ ಝೋನ್ ಸರ್ವೆ ನಡೆಸಿ ಒತ್ತುವರಿ ತೆರವು ಮಾಡಿ: ಪಾಲಿಕೆ, ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಕಲಬುರಗಿಯಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದರು. ಉತ್ತರ ಕರ್ನಾಟಕದ ರಾಜಕಾರಣಿಗಳು ಬಹಳ ಮುಗ್ಧರಿದ್ದಾರೆ, ಅವರ ಮಗ್ಧತೆ ಬಳಸಿಕೊಂಡು ಖೆಡ್ಡಾ ತೋಡಲಾಗ್ತಿದೆ‌. ವಿನಾಕಾರಣ ನಮ್ಮ ಭಾಗದ ಮುಗ್ಧ ರಾಜಕಾರಣಿಗಳ ವಿರುದ್ಧ ಷಡ್ಯಂತ್ರ ಮಾಡಲಾಗ್ತಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ರಾಜಕಾರಣಿಗಳು ಮೈ ಮರೆಯಬಾರದು. ರಾಜಕಾರಣಿಗಳು ಇನ್ನು ಮುಂದಾದರೂ ಎಚ್ಚರಿಕೆಯಿಂದ ಇರಬೇಕು ಎಂದು ಮುಲಾಲಿ ತಿಳಿಸಿದ್ದಾರೆ.

ಸಿಡಿ ಅಸಲಿಯೋ, ನಕಲಿಯೋ ತನಿಖೆಯಿಂದ ಗೊತ್ತಾಗಲಿದೆ. ರಮೇಶ್ ಜಾರಕಿಹೊಳಿ ಪ್ರಕರಣದ ನಂತರ ಬೇರೆಯವರಲ್ಲಿಯೂ ನಡುಕ ಶುರುವಾಗಿದೆ. ಅದರಲ್ಲಿ ಜಾರಕಿಹೊಳಿ ಅವರೊಂದಿಗೆ ಪಕ್ಷಾಂತರ ಮಾಡಿ, ಸಚಿವರಾಗಿರೋರಿಗೆ ಭೀತಿ ಸೃಷ್ಟಿಯಾಗಿದೆ. ಮೋಸ ಮಾಡೋರಿಗೆ ಬೇಗನೇ ಮೋಸ ಹೋಗ್ತಿದಾರೆ. ರಾಜಕಾರಣಿಗಳನ್ನೇ ಟಾರ್ಗೆಟ್ ಮಾಡುವ ದೊಡ್ಡ ಜಾಲವಿದೆ, ಅದರಿಂದ ಎಚ್ಚರಿಕೆ ವಹಿಸೋದು ಅಗತ್ಯ ಎಂದರು.

ABOUT THE AUTHOR

...view details