ಕಲಬುರಗಿ: ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಹಾವು ಕಚ್ಚಿದ ಪರಿಣಾಮ ಮಹಿಳೆಯೋರ್ವಳು ಮೃತಪಟ್ಟಿರುವ ಘಟನೆ ವಾಡಿ ಪಟ್ಟಣದ ಬಸವನಕಣಿ ಬಡಾವಣೆಯಲ್ಲಿ ನಡೆದಿದೆ.
ಕಲಬುರಗಿ: ಹಾವು ಕಚ್ಚಿ ಮಹಿಳೆ ಸಾವು - ಕಲಬುರಗಿ ಲೇಟೆಸ್ಟ್ ಅಪ್ಡೇಟ್ ನ್ಯೂಸ್
ಹಾವು ಕಚ್ಚಿ ಮಹಿಳೆಯೋರ್ವಳು ಮೃತಪಟ್ಟಿರುವ ಘಟನೆ ವಾಡಿ ಪಟ್ಟಣದ ಬಸವನಕಣಿ ಬಡಾವಣೆಯಲ್ಲಿ ನಡೆದಿದೆ.
ಕಲಬುರಗಿ: ಹಾವು ಕಚ್ಚಿ ಮಹಿಳೆ ಸಾವು
ನಾಗಮ್ಮ ಭೋವಿವಡ್ಡರ್ (55) ಮೃತ ಮಹಿಳೆ. ಹೊಲದಲ್ಲಿ ಕೆಲಸ ಮಾಡುವ ವೇಳೆ ವಿಷ ಸರ್ಷ ಕಚ್ಚಿದೆ. ಕೂಡಲೇ ಅವರನ್ನು ವಾಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆರೋಗ್ಯದಲ್ಲಿ ಚೇತರಿಕೆಯಾಗಿಲ್ಲದ ಕಾರಣ ವೈದ್ಯರ ಸೂಚನೆಯಂತೆ ಕಲಬುರಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲೇ ಮಹಿಳೆ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.